ಅಂತರಾಷ್ಟ್ರೀಯ

ವ್ಯಕ್ತಿಯೊಬ್ಬನಿಂದ ಮದ್ಯ ಸೇವಿಸಿ ಅಮೆರಿಕನ್‌ ಏರ್‌ಲೈನ್ಸ್‌ ವಿಮಾನದಲ್ಲಿ ವ್ಯಾಯಾಮ: ತುರ್ತು ಭೂಸ್ಪರ್ಶ

Pinterest LinkedIn Tumblr


ಪ್ರಯಾಣಿಕರ ಹುಚ್ಚುತನದಿಂದಾಗಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದ ಅಥವಾ ವಿಮಾನ ವನ್ನು ತುರ್ತು ಭೂಸ್ಪರ್ಶ ಮಾಡಿಸಿದ ಘಟನೆಗಳ ಬಗ್ಗೆ ಆಗಾಗ ಓದುತ್ತಿರುತ್ತೀರಿ.

ಅಂಥದ್ದೇ ಘಟನೆ ಅಮೆರಿಕದಲ್ಲಿ ನಡೆದಿದೆ. ಫೀನಿಕ್ಸ್‌ನಿಂದ ಬೋಸ್ಟನ್‌ಗೆ ಹೊರಟಿದ್ದ ವಿಮಾನವನ್ನು ಏರಿದ ವ್ಯಕ್ತಿ ವಿಮಾನದಲ್ಲೇ ವ್ಯಾಯಾಮ ಕಸರತ್ತು ಮಾಡಲು ಆರಂಭಿಸಿದ ಕಾರಣ ವಿಮಾನವನ್ನು ಕನ್ಸಾಸ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾದ ಗತಿ ಅಮೆರಿಕನ್‌ ಏರ್‌ಲೈನ್ಸ್‌ನ ವಿಮಾನಕ್ಕೆ ಬಂದಿತ್ತು. ವ್ಯಕ್ತಿ ವಿಮಾನವೇರಿದಾಗಲೇ ಮದ್ಯಪಾನ ಮಾಡಿದ್ದ. ವಿಮಾನ ಟೇಕ್‌ಆಫ್ ಆಗುತ್ತಲೇ ಆತ ಇನ್ನಷ್ಟು ಮದ್ಯ ನೀಡಲು ಗಗನಸಖೀಯರಿಗೆ ಆಗ್ರಹಿಸಿದ.

ಪ್ರಯಾಣಿಕರ ಲಗೇಜು ಗಳನ್ನು ಕಸಿದು ಪುಲ್‌ಅಪ್ಸ್‌ ಮಾಡಲು ಆರಂಭಿಸಿದ. ಅವರ ಆಸನದಲ್ಲಿ ಕುಳಿತುಕೊಳ್ಳಲು ಹೇಳಿದ ಗಗನಸಖೀಯ ಹೆಸರನ್ನು ಕೂಗಿ ಅವಾಚ್ಯ ಪದಗಳಿಂದ ನಿಂದಿಸಿದ. ಆತನ ವರ್ತನೆ ಮಿತಿಮೀರಿತು ಮತ್ತು ಆತ ವ್ಯಾಯಾಮ ಮಾಡುವುದನ್ನು ಇನ್ನಷ್ಟು ತೀವ್ರಗೊಳಿಸಿದ. ಈತನನ್ನು ಕೆಳಗಿಳಿಸದೇ ಬೇರೆ ವಿಧಿಯೇ ಇಲ್ಲದಂತಾಗಿ ವಿಮಾನ ಸಿಬ್ಬಂದಿ ಕನ್ಸಾಸ್‌ನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿಸಿ, ಆತನನ್ನು ವಿಮಾನದಿಂದ ಹೊರಹಾಕಿದರು.

Comments are closed.