ಜಕಾರ್ತ: ಇಂಡೋನೆಷ್ಯಾ ರಾಜಧಾನಿಯಿಂದ ಪಾಂಗ್ಕಲ್ ಪಿನಾಗ್ ದ್ವೀಪಕ್ಕೆ ಹೊರಟಿದ್ದ ಲಯನ್ ಏರ್ ಬೋಯಿಂಗ್ 737 ವಿಮಾನ ಸೋಮವಾರ ಬೆಳಿಗ್ಗೆ ಪತನಗೊಂಡಿದೆ. ಈ ವಿಮಾನದಲ್ಲಿ 188 ಜನ ಪ್ರಯಾಣಿಕರು ಹಾಗೂ ಪೈಲೆಟ್ಗಳು ಇದ್ದರು ಎನ್ನಲಾಗಿದೆ. ಅವರೆಲ್ಲರು ಬದುಕಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಕಾರ್ತದಿಂದ ಬೆಳಗ್ಗೆ ಸುಮಾರು 6.33ರ ಸುಮಾರಿಗೆ ವಿಮಾನ ಏರ್ ಟ್ರಾಫಿಕ್ ಕಂಟ್ರೋಲರ್ನ ಸಂಪರ್ಕ ಕಳೆದುಕೊಂಡಿತ್ತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬಳಿಗ್ಗೆ ಪಾಂಗ್ಕಲ್ ಪಿನಾಗ್ ದ್ವೀಪದಲ್ಲಿ ಇಳಿಯಬೇಕಿದ್ದ ಈ ವಿಮಾನ ಸಮುದ್ರಕ್ಕೆ ಪತನಗೊಂಡಿದೆ.
ವಿಮಾನದಲ್ಲಿದ್ದ ಪ್ರಯಾಣಿಕರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಮುದ್ರದಲ್ಲಿ ವಿಮಾನದ ಬಿಡಿಭಾಗಗಳು ತೇಲುತ್ತಿದ್ದು ಹಲವು ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸುಮಾರು 188 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವುಳ್ಳ ಈ ವಿಮಾನ ಹೊಂದಿತ್ತು. ಇಂಡೋನೆಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಏಜೆನ್ಸಿಯು ಶೋಧ ಕಾರ್ಯದಲ್ಲಿ ನಿರತವಾಗಿದೆ.
2015 ಆಗಸ್ಟ್ ನಲ್ಲಿ ಇದೇ ರೀತಿಯಾಗಿ ವಿಮಾನವೊಂದು ಪತನಗೊಂಡು ಸುಮಾರು 54 ಪ್ರಯಾಣಿಕರು ದುರಂತದಲ್ಲಿ ಸಾವನ್ನಪ್ಪಿದ್ದರು.
Comments are closed.