ಅಂತರಾಷ್ಟ್ರೀಯ

ತಾಲಿಬಾನ್ ಉಗ್ರ ಸಂಘಟನೆ ಪಿತಾಮಹ​​ನನ್ನು ಮನೆಯಲ್ಲೇ ಚಾಕುವಿನಿಂದ ಇರಿದು ಕೊಲೆ

Pinterest LinkedIn Tumblr

ಇಸ್ಲಾಮಾಬಾದ್​: ತಾಲಿಬಾನ್​​ ಎಂಬ ಉಗ್ರ ಸಂಘಟನೆಯನ್ನು ಹುಟ್ಟುಹಾಕಿ ಸಾವಿರಾರು ಅಮಾಯಕರ ಸಾವಿಗೆ ಕಾರಣನಾಗಿದ್ದ ಪಾಕಿಸ್ತಾನ ಮೂಲದ ಉಗ್ರ ಮೌಲಾನಾ ಸಮೀ-ಉಲ್​​ ಹಕ್ ಅಪರಿಚಿತರು ಅವನದೇ ಮನೆಯಲ್ಲಿ ಚಾಕು ಇರಿದು ಕೊಂದು ಹಾಕಿದ್ದಾರೆ.

ತಾಲಿಬಾನ್ ಉಗ್ರ ಸಂಘಟನೆ ಪಿತಾಮಹ ಎಂದೇ ಕರೆಯಲ್ಪಡುತ್ತಿದ್ದ ಪಾಕಿಸ್ತಾನದ ಧಾರ್ಮಿಕ ಗುರು ಹಾಗೂ ಮಾಜಿ ಸೆನೇಟರ್​​ ಮೌಲಾನಾ ಸಮೀ-ಉಲ್​​ ಹಕ್​​ನನ್ನು ಮನೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸಮೀ ಉಲ್​ ಹಕ್​ ಪುತ್ರ ಹಮೀದ್​​-ಉಲ್​-ಹಕ್​​ ತಂದೆಯ ಕೊಲೆಯ ಬಗ್ಗೆ ದೃಢಪಡಿಸಿದ್ದು, ರಾವಲ್ಪಿಂಡಿಯಲ್ಲಿರುವ ಸಮೀ ಉಲ್​​-ಹಕ್​​ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಪಾಕಿಸ್ತಾನ ಸುದ್ದಿ ಸಂಸ್ಥೆ ಅಲ್ ಜಜೀರಾ ವರದಿ ಮಾಡಿದೆ.

ಈ ಬಗ್ಗೆ ಮಾತನಾಡಿರುವ ಸಮೀ ಉಲ್​​-ಹಕ್ ಪುತ್ರ, ‘ನನ್ನ ತಂದೆ ರೂಮಿನಲ್ಲಿ ಒಬ್ಬರೇ ಇದ್ದಾಗ ದುಷ್ಕರ್ಮಿಯೊಬ್ಬ ನನ್ನ ತಂದೆ ಮೇಲೆ ಚಾಕುವಿನಿಂದ ದಾಳಿ ಮಾಡಿ, ಪರಾರಿಯಾದ. ಈ ವೇಳೆ ಗಾರ್ಡ್​​ಗಳು ಹೊರಗೆ ಹೋಗಿದ್ದರು. ಅವರು ವಾಪಸ್​ ಬಂದು ನೋಡಿದಾಗ ನನ್ನ ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದಾರೆ ಎಂದು ಹೇಳಿದ್ದಾನೆ.

81 ವರ್ಷದ ಸಮೀ-ಉಲ್-ಹಕ್​ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಮತ್ತೊಂದು ಉಗ್ರ ಸಂಘಟನೆ ‘ಸಿಮಿ’ಯ ವಕ್ತಾರ ಯೂಸಫ್​​​​ ಶಾಹ್​​ ಘಟನೆ ಬಗ್ಗೆ ಹೇಳಿಕೆ ನೀಡಿದ್ದು, ದುಷ್ಕರ್ಮಿ ಯಾರು? ಕೊಲೆಯ ಹಿಂದಿನ ಕಾರಣವೇನು ಅನ್ನೋದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾನೆ. ಸಮೀ ಉಲ್​​ ಹಕ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿಲ್ಲ. ಇಂದು ಮಧ್ಯಾಹ್ನ ಅಕೋರಾ ಕಟ್ಟಕ್ ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಕೊಲೆ ಸಂಬಂಧ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಯಾರೂ ಈ ಸಮಿ ಉಲ್ ಹಕ್?
ಸಮೀ ಉಲ್​​ ಹಕ್​​​, ಪಾಕಿಸ್ತಾನದಲ್ಲಿ ಪ್ರಖ್ಯಾತ ಧಾರ್ಮಿಕ ಗುರುವಾಗಿದ್ದ. ಈತನಿಗೆ ಸಾಕಷ್ಟು ಮುಸಲ್ಮಾನ ಹಿಂಬಾಲಕರಿದ್ದರು. ಈತನ ಹಕ್ಕಾನಿ ಸೆಮಿನರಿ ಅಫ್ಘಾನಿಸ್ತಾನದ ತಾಲಿಬಾನ್ ಗೆ ಹಾಗೂ ಇತರೆ ಸಾಕಷ್ಟು ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಾದ ಇಸ್ಲಾಂ ಧರ್ಮದ ವ್ಯಾಖ್ಯಾನದ ಬಗ್ಗೆ ಪಾಠ ಮಾಡಿತ್ತು. ಉಗ್ರ ಸಂಘಟನೆ ಹಕ್ಕಾನಿ ನೆಟ್ವರ್ಕ್ ನ ಸಿರಾಜುದ್ದೀನ್​ ಹಕ್ಕಾನಿ ಸೇರಿದಂತೆ ಸಾಕಷ್ಟು ತಾಲಿಬಾನ್​​​​ ಉಗ್ರರು ಇದೇ ಹಕ್​​ ಸೆಮಿನರಿಯಿಂದ ಪದವಿ ಪಡೆದವರಾಗಿದ್ದಾರೆ.

Comments are closed.