ಅಂತರಾಷ್ಟ್ರೀಯ

ಭಾರತೀಯನೆಂದು ತಮ್ಮದೇ ವಿಮಾನದ ಪೈಲಟ್ ನನ್ನು ಹಿಗ್ಗಾಮುಗ್ಗಾ ಥಳಿಸಿದ ಪಾಕಿಸ್ತಾನಿಗರು ! ಅಷ್ಟಕ್ಕೂ ನಡೆದಿದ್ದೇನು…?

Pinterest LinkedIn Tumblr

ಇಸ್ಲಾಮಾಬಾದ್: ಪಾಕಿಸ್ತಾನ ಎಂತಹಾ ಎಡವಟ್ಟು ರಾಷ್ಟ್ರವೆನ್ನಲು ಈ ಒಂದು ಸುದ್ದಿ ತಾಜಾ ಉದಾಹರಣೆಯಾಗಿದೆ. ಪಾಕ್ ಯುದ್ಧ ವಿಮಾನ ಎಫ್ 16 ಭಾರತದ ವಾಯುಗಡಿಯೊಳಗೆ ನುಗ್ಗಿದ್ದಾಗ ಭಾರತೀಯ ಪಡೆ ಇದನ್ನು ಹೊಡೆದುರುಳಿಸಿದೆ. ಆ ವೇಳೆ ಎಫ್16 ನಲ್ಲಿದ್ದ ಪೈಲಟ್ ಪಾಕ್ ಗಡಿಯೊಳಗೆ ಪ್ಯಾರಾಚೂಟ್ ಬಳಸಿ ಇಳಿದಿದ್ದು ಆಗ ಅಲ್ಲಿನ ಸ್ಥಳೀಯರು ಆತ ಭಾರತೀಯನೆಂದೇ ಶಂಕಿಸಿ ಅವನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ!

ಆತ ಭಾರತೀಯನೆಂದು ಭಾವಿಸಿದ ಸ್ಥಳೀಯ ಪಾಕ್ ನಿವಾಸಿಗಳು ತಮ್ಮದೇ ಪೈಲಟ್ ಗೆ ಅರೆಜೀವವಾಗುವಂತೆ ಥಳಿಸಿದ ಘಟನೆ ಬುಧವಾರ ನಡೆದಿದೆ. ಬಾರತ ವಾಯುಪಡೆ ಪಾಕಿಸ್ತಾನದ ಎಫ್16 ಯುದ್ಧ ವಿಮಾನವನ್ನು ಪತನಗೊಳಿಸಿದ ಬೆನ್ನಲ್ಲಿ ಈ ಘಟನೆ ನಡೆದಿತ್ತು.

ಇನ್ನು ಇಲ್ಲಿನ ಸರ್ಕಾರ ಸಹ ಪ್ರಾರಂಭದಲ್ಲಿ ತಮ್ಮದೇ ಪೈಲಟ್ ಅನ್ನು ಭಾರತೀಯ ಎಂದೇ ಭಾವಿಸಿದೆ. ಅದೇ ಕಾರಣದಿಂದ ತಮ್ಮ ಬಳಿ ಇಬ್ಬರು ಭಾರತೀಯ ಪೈಲಟ್ ಗಳಿದ್ದಾರೀಂದು ಘೋಷಣೆ ಹೊರಡಿಸಿತ್ತು. ಆದರೆ ಇಬರು ಭಾರತೀಯ ಪೈಲಟ್ ಗಳು ತಮ್ಮ ವಶದಲ್ಲಿದ್ದಾರೆ ಎಂದು ಘೋಷಿಸಿದ ಸ್ವಲ್ಪದರಲ್ಲೇ ಅದರಲ್ಲೊಬ್ಬ ತಮ್ಮದೇ ನಾಡಿನವ ಎನ್ನುವುದು ತಿಳಿದಿದೆ.

ಇದರಿಂದ ಮತ್ತೆ ಮುಜುಗರಕ್ಕೀಡಾದ ಪಾಕ್ ಸಂಜೆ ವೇಳೆಗೆ ತಮ್ಮ ವಶದಲ್ಲಿರುವುದು ಓರ್ವ ಭಾರತೀಯ ಪೈಲಟ್ ಮಾತ್ರ ಎಂದು ಹೇಳಿಕೆ ನೀಡಿತ್ತು.

ಸಧ್ಯ ನಿನ್ನೆ ನಡೆದ ವಾಯುದಾಳಿಯ ವೇಳೆ ಮಿಗ್ ವಿಮಾನವೊಂದು ಪತನವಾಗಿ ಅದರಲ್ಲಿನ ಪೈಲಟ್ ವಿಂಡ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಾಕ್ ಸೇನೆ ವಶದಲ್ಲಿದ್ದಾರೆ.

Comments are closed.