ಯುನೈಟೆಡ್ ನೇಷನ್ಸ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೆಎಂ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಅಮೆರಿಕ, ಯುಕೆ ಮತ್ತು ಫ್ರಾನ್ಸ್ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಒತ್ತಾಯಿಸಿದೆ.
15 ರಾಷ್ಟ್ರಗಳ ಭದ್ರತಾ ಮಂಡಳಿಯ ಮೂರು ಶಾಶ್ವತ ವೀಟೋ ಅಧಿಕಾರವಿರುವ ರಾಷ್ಟ್ರಗಳು ಭದ್ರತಾ ಮಂಡಳಿಯಲ್ಲಿ ಮತ್ತೆ ಹೊಸದಾಗಿ ಒತ್ತಡ ಹೇರಿದೆ.ಉಗ್ರ ಮಸೂದ್ ಆಝರ್ ನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಜಾಗತಿಕ ಪ್ರದೇಶಕ್ಕೆ ನಿಷೇಧ, ಜೆಇಎಂ ಹಾಗೂ ಮಸೂದ್ ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎನ್ನುವ ಕುರಿತು ಮೂರನೇ ಬಾರಿಗೆ ಪ್ರಯತ್ನ ನಡೆಯುತ್ತಿದೆ.
ಮೂರು ರಾಷ್ಟ್ರಗಳ ಈ ಹೊಸ ಪ್ರಸ್ತಾಪವನ್ನು ಪರಿಗಣಿಸಲು ಭದ್ರತಾ ಮಂಡಳಿ ಹತ್ತು ಕೆಲಸದ ದಿನಗಳ ಗಡುವನ್ನು ತೆಗೆದುಕೊಳ್ಳಲಿದೆ. ಕಳೆದ 10 ವರ್ಷಗಳಲ್ಲಿ ಅಜರ್ ಅವರನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ನಡೆಯುತ್ತಿರುವ ನಾಲ್ಕನೇ ಪ್ರಯತ್ನ ಇದಾಗಿದೆ. ಈ ಹಿಂದೆ 2009, 2016 ಹಾಗೂ 2017ರಲ್ಲಿ ಇದೇ ಪ್ರಸ್ತಾಪವನ್ನು ಭಾರತ ಸೇರಿ ಅನೇಕ ರಾಷ್ಟ್ರಗಳು ಮುಂದಿಟ್ಟಾಗ ಚೀನಾ ಅಡ್ಡಗಾಲು ಹಾಕಿತ್ತು.
ಆದರೆ ಈ ಬಾರಿಯ ಪ್ರಸ್ತಾವನೆಗೆ ಚೀನಾ ಹೇಗೆ ಪ್ರತಿಕ್ರಯಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಪುಲ್ವಾಮಾ ದಾಳಿ ಬಳಿಕ ಭಾರತ ಇದೇ ಮಂಗಳವಾರ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಏರ್ ಸ್ಟ್ರೈಕ್ ನಡೆಸಿ ಮುನ್ನೂರಕ್ಕೆ ಹೆಚು ಉಗ್ರರನ್ನು ಸದೆಬಡಿದ ಬಳಿಕ ಪಾಕಿಸ್ತಾನದ ಆತ್ಮೀಯ ಚೀನಾ ಪಾಕ್ ಗೆ ಎಚ್ಚರಿಕೆ ನಿಡಿದೆ.
Comments are closed.