ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಕುಟುಂಬಸ್ಥರಿಗೆ ನೆರವಾಗಲು ಅಮೆರಿಕದಲ್ಲಿ ನೆಲೆಸಿರುವ ಗುಜರಾತ್ನ ಯುವಕನೊಬ್ಬ ಫೇಸ್ಬುಕ್ ಮೂಲಕ ಅಂದಾಜು 7 ಕೋಟಿ ರೂ. ಸಂಗ್ರಹಿಸಿದ್ದಾರೆ.
ಪುಲ್ವಾಮಾ ದಾಳಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಚರ್ಚೆ ಮಾಡದೆ, ಬೇರೆಯವರ ಪೋಸ್ಟ್ಗಳಿಗೆ ಕಮೆಂಟ್ ಮಾಡದೆ, ಕೇವಲ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ವ್ಯಕ್ತಪಡಿಸದೆ ಹುತಾತ್ಮ ಯೋಧರ ಕುಟುಂಬದವರಿಗೆ ನೆರವಾಗಬೇಕು ಎಂದು ಯೋಚಿಸಿದೆ. ಅದರಂತೆ ಭಾರತ್ ಕೆ ವೀರ್ ವೆಬ್ಸೈಟ್ನಲ್ಲಿ ದೇಣಿಗೆ ನೀಡಲು ಪ್ರಯತ್ನಿಸಿದೆ, ಆದರೆ ವೆಬ್ಸೈಟ್ ಮೂಲಕ ದೇಣಿಗೆ ನೀಡಲು ಸಾಧ್ಯವಾಗಲಿಲ್ಲ. ಆ ನಂತರ ಫೇಸ್ಬುಕ್ ಮೂಲಕ ದೇಣಿಗೆ ಸಂಗ್ರಹಿಸಿ ನೀಡಲು ನಿರ್ಧರಿಸಿದ್ದಾಗಿ ವಿವೇಕ್ ತಿಳಿಸಿದ್ದಾರೆ.
ಅದರಂತೆ ಫೇಸ್ಬುಕ್ ಫಂಡ್ ರೈಸರ್ ಪೇಜ್ ಕ್ರಿಯೇಟ್ ಮಾಡಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ ಫೇಸ್ಬುಕ್ ಬಳಕೆದಾರರು ಉದಾರವಾಗಿ ದೇಣಿಗೆ ನೀಡಿದರು. ಪೇಜ್ ಕ್ರಿಯೇಟ್ ಮಾಡಿದ 12 ಗಂಟೆಗಳಲ್ಲೇ 2 ಲಕ್ಷ ಡಾಲರ್ಗೂ ಹೆಚ್ಚಿನ ದೇಣಿಗೆ ಸಂಗ್ರಹವಾಗಿತ್ತು. ಈಗ 14 ದಿನಗಳ ನಂತರ 10 ಲಕ್ಷ ಡಾಲರ್ಗೂ (ಅಂದಾಜು 7 ಕೋಟಿ ರೂ.) ಹೆಚ್ಚಿನ ದೇಣಿಗೆ ಸಂಗ್ರಹವಾಗಿದೆ. ಅಮೆರಿಕ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಿಂದಲೂ ನನಗೆ ಕರೆ ಮಾಡಿ ದೇಣಿಗೆ ನೀಡಿದ್ದಾರೆ.
ಫೇಸ್ಬುಕ್ ಮೂಲಕ ಸಂಗ್ರಹವಾಗಿರುವ ದೇಣಿಗೆಯನ್ನು ಭಾರತ ಸರ್ಕಾರಕ್ಕೆ ಹಸ್ತಾಂತರಿಸಲು ನ್ಯೂಯಾರ್ಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದೇನೆ. ಶೀಘ್ರ ದೇಣಿಗೆಯನ್ನು ಭಾರತ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ವಿವೇಕ್ ತಿಳಿಸಿದ್ದಾರೆ.
Comments are closed.