ಅಡ್ಡಿಸ್ ಅಬಾಬಾ: ನೈರೊಬಿಗೆ ತೆರಳುತ್ತಿದ್ದ ಇಥಿಯೋಪಿಯನ್ ಏರ್ಲೈನ್ಸ್ ವಿಮಾನ ಇಂದು ಬೆಳಗ್ಗೆ ಪತನಗೊಂಡಿದೆ. ವಿಮಾನದಲ್ಲಿ 149 ಪ್ರಯಾಣಿಕರು ಮತ್ತು ಎಂಟು ಮಂದಿ ಸಿಬ್ಬಂದಿ ಇದ್ದರು ಎಂದು ಇಥಿಯೋಪಿಯಾ ಪ್ರಧಾನಮಂತ್ರಿ ಕಾರ್ಯಾಲಯ ಹೇಳಿದೆ. ವಿಮಾನದಲ್ಲಿ ಇದ್ದವರು ಬದುಕುಳಿದಿರುವುದು ಅನುಮಾನವಾಗಿದೆ.
ಭಾನುವಾರ ಬೆಳಗ್ಗೆ ಇಥಿಯೊಪಿಯನ್ ಬೋಯಿಂಗ್ 737 ವಿಮಾನ ನಿಗದಿತ ವೇಳಾಪಟ್ಟಿಯಂತೆ ಹಾರಾಟ ನಡೆಸಿತ್ತು. ಆದರೆ, ಹಾರಾಟ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ವಿಮಾನ ಪತನಗೊಂಡಿದೆ. ಉಳಿದಂತೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ.
ಇಥಿಯೋಪಿಯಾದ ರಾಜಧಾನಿ ಅಡ್ಡಿಸ್ ಅಬಾಬಾ ಬಳಿ ವಿಮಾನ ಪತನಗೊಂಡಿರವುದನ್ನು ಏರ್ಲೈನ್ಸ್ ವಕ್ತಾರ ದೃಢಪಡಿಸಿದ್ದಾರೆ. ಆದರೆ, ನಿಖರವಾಗಿ ಯಾವ ಸ್ಥಳದಲ್ಲಿ ಪತನಗೊಂಡಿದೆ ಎಂಬುದನ್ನು ಏರ್ಲೈನ್ಸ್ ತಿಳಿಸಿಲ್ಲ.
Comments are closed.