ಅಂತರಾಷ್ಟ್ರೀಯ

ಉಗ್ರ ಮಸೂದ್ ಅಜರ್ ಆಸ್ತಿ ಜಪ್ತಿಗೆ ಮುಂದಾಗಿರುವ ಫ್ರಾನ್ಸ್ ಸರಕಾರ

Pinterest LinkedIn Tumblr

ಪ್ಯಾರಿಸ್: ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಆಸ್ತಿ ಜಪ್ತಿಗೆ ಫ್ರಾನ್ಸ್ ನಿರ್ಧಾರ ಕೈಗೊಂಡಿದೆ.

ಭಾರತದ ಒತ್ತಡಕ್ಕೆ ಮಣಿದು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಫ್ರಾನ್ಸ್ ಮುಂದಾಗಿತ್ತು. ಆದರೆ ಈ ವಿಚಾರದಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಫ್ರಾನ್ಸ್ ಮಸೂದ್ ಅಜರ್ ಆಸ್ತಿಗೆ ಜಪ್ತಿಗೆ ಮುಂದಾಗಿದೆ.

ವಿಶ್ವಕಪ್ ನಲ್ಲಿ ಮಸೂದ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಚೀನಾ ಅಡ್ಡಗಾಲು ಹಾಕಿದೆ. ಇದರಿಂದಾಗಿ ಮಸೂದ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವಲ್ಲಿ ಹಿನ್ನಡೆಯಾಗಿದೆ. ಹೀಗಾಗಿ ಫ್ರಾನ್ಸ್ ನಲ್ಲಿರುವ ಮಸೂದ್ ಅಜರ್ ಆಸ್ತಿ ಜಪ್ತಿಗೆ ಸರ್ಕಾರ ಮುಂದಾಗಿದೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದರು.

Comments are closed.