ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸಾವಿರಾರು ಕೋಟಿ ರೂಪಾಯಿ ಪಾವತಿಸದೇ ದೇಶ ಬಿಟ್ಟು ಓಡಿಹೋಗಿದ್ದ ವಜ್ರದ ಉದ್ಯಮಿ ನೀರವ್ ಮೋದಿಯನ್ನು ಲಂಡನ್ನಲ್ಲಿ ಬಂಧಿಸಲಾಗಿದೆ. ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ 13 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ ತಲೆತಪ್ಪಿಸಿಕೊಂಡಿದ್ದರು. ಆದರೀಗ ಅವರನ್ನು ಲಂಡನ್ನಲ್ಲಿ ಬಂಧನ ಮಾಡಲಾಗಿದ್ದು ಭಾರತದ ಜತೆ ಹಸ್ತಾಂತರ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಎಲ್ಲವೂ ಲೆಕ್ಕಾಚಾರಗಳಂತೆ ನಡೆದರೆ ಮದ್ಯ ದೊರೆ ವಿಜಯ್ ಮಲ್ಯಾ ಸ್ಥಿತಿಯೇ ನೀರವ್ ಮೋದಿಗೂ ಬರಲಿದೆ.
ಕೆಲ ದಿನಗಳ ಹಿಂದೆ ಇಂಗ್ಲೆಂಡ್ನ ಪತ್ರಿಕೆ ‘ಟೆಲಿಗ್ರಾಫ್’ ವರದಿಗಾರರೊಬ್ಬರಿಗೆ ಅಚಾನಕ್ಕಾಗಿ ನೀರವ್ ಮೋದಿ ಸಿಕ್ಕಿದ್ದರು. ಲಕ್ಷಾಂತರ ರೂ. ಬೆಲೆ ಬಾಳುವ ಆಸ್ಟ್ರಿಚ್ ಲೆದರ್ ಜ್ಯಾಕೆಟ್ ಹಾಕಿಕೊಂಡು ರಾಜಾರೋಷವಾಗಿ ನೀರವ್ ಮೋದಿ ಓಡಾಡುತ್ತಿದ್ದಾಗ ವರದಿಗಾರರೊಬ್ಬರು ಭಾರತಕ್ಕೆ ಮರಳುವ ಮತ್ತು ತೆರಿಗೆದಾರರಿಗೆ ವಂಚಿಸಿರುವ ಹಣವನ್ನು ಮರುಪಾವತಿ ಮಾಡುವ ಬಗ್ಗೆ ಕೇಳಿದಾಗ, ಪ್ರತಿಕ್ರಿಯೆ ನೀಡಿರಲಿಲ್ಲ.
ಜಾಮೀನು ಕೋರಿ ನೀರವ್ ಮೋದಿ ಅರ್ಜಿ ಸಲ್ಲಿಸಬಹುದು. ಕೋರ್ಟ್ ಜಾಮೀನು ನೀಡಿದರೆ ಅವರ ಬಂಧನ ಅಸಾಧ್ಯವಾಗಲಿದೆ. ಇತ್ತೀಚೆಗೆ ಅವರು ಬೆಲೆಬಾಳುವ ಜಾಕೆಟ್ ಧರಿಸಿ ಲಂಡನ್ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು.
ಭಾರತದ ವಜ್ರದ ವ್ಯಾಪಾರಿ ನೀರವ್ ಮೋದಿ ವಿರುದ್ಧ ಲಂಡನ್ನ ವೆಸ್ಟ್ಮಿನ್ಸ್ಟರ್ ನ್ಯಾಯಾಲಯ ಮಂಗಳವಾರವಷ್ಟೇ ಅರೆಸ್ಟ್ ವಾರಂಟ್ ಹೊರಡಿಸಿತ್ತು. ಅದರ ಬೆನ್ನಲ್ಲೇ ಈಗ ಅವರನ್ನು ಬಂಧಿಸಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನ 13,000 ಕೋಟಿ ರೂ. ಹಗರಣದ ಪ್ರಮುಖ ಆರೋಪಿ ಆಗಿರುವ ನೀರವ್ ಲಂಡನ್ನಲ್ಲಿ ತಲೆಮರಿಸಿಕೊಂಡಿದ್ದರು. ಅವರನ್ನು ಭಾರತಕ್ಕೆ ಹಸ್ತಾಂತರಿಸುವಂಗತೆ ಭಾರತ ಕೋರಿತ್ತು. ಕೇಂದ್ರ ಗೃಹಸಚಿವಾಲಯದ ಕಾರ್ಯದರ್ಶಿ ಸಾಜಿದ್ ಜಾವೀದ್ ದೃಢೀಕರಿಸಿದ ನಂತರದಲ್ಲಿ ಈ ಬೆಳವಣಿಗೆ ನಡೆದಿತ್ತು.
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಮುಂಬೈ ಬ್ರ್ಯಾಂಚ್ ಒಂದರಲ್ಲಿ ಬೃಹತ್ ಮೊತ್ತದ ಅವ್ಯವಹಾರ ನಡೆದಿರುವುದನ್ನು ಪತ್ತೆಹಚ್ಚಿತ್ತು. ಸುಮಾರು 1.77 ಬಿಲಿಯನ್ ಡಾಲರ್ (ಸುಮಾರು 13,000 ಕೋಟಿ ರೂ) ಮೊತ್ತದಷ್ಟು ವಂಚನೆ ಎಸಗಲಾಗಿದೆ ಎಂದು ಸಂಸ್ಥೆ ಹೇಳಿತ್ತು. 2018ರ ಆಗಸ್ಟ್ ತಿಂಗಳಲ್ಲಿ ನೀರವ್ ಮೋದಿ ಹಸ್ತಾಂತರಕ್ಕೆ ಭಾರತ ಮನವಿ ಮಾಡಿತ್ತು. ಜೊತೆಗೆ ಭಾರತ ಅವರನ್ನು ಗಡೀಪಾರು ಮಾಡುವಂತೆ ಕೋರಿತ್ತು. ಅಕ್ರಮ ಹಣ ವರ್ಗಾವಣೆ ಸೇರಿ ಅನೇಕ ಪ್ರಕರಣಗಳು ಅವರ ಮೇಲಿವೆ. ಇತ್ತೀಚೆಗೆ ಅವರಿಗೆ ಸೇರಿದ ಐಷಾರಾಮಿ ಕಟ್ಟಡವನ್ನು ನೆಲಸಮ ಮಾಡಲಾಗಿತ್ತು.
Comments are closed.