ಅಂತರಾಷ್ಟ್ರೀಯ

ಪ್ರಿಯಕರನೊಂದಿಗೆ ಸೆಕ್ಸ್’ಗಾಗಿ ಮಗುವನ್ನು ಕಾರಿನೊಳಗೆ ಕೂಡಿಹಾಕಿ ಆಕೆಯ ಸಾವಿಗೆ ಕಾರಣಳಾದ ತಾಯಿ !

Pinterest LinkedIn Tumblr

ವಾಷಿಂಗ್ ಟನ್: ತಾಯಿಯ ಕ್ಷಣಿಕ ಆಸೆಗೆ ಮೂರು ವರ್ಷದ ಮಗು ಬಲಿಯಾಗಿದೆ. ಪ್ರಿಯತಮನೊಂದಿಗೆ ಬಯಕೆ ತೀರಿಸಿಕೊಳ್ಳಲು ಹೋದ ತಾಯಿ ಹಿಂದಕ್ಕೆ ಬಂದು ನೋಡಿದಾಗ ಮಗು ಸಾವಿನ ಕದ ತಟ್ಟಿತ್ತು.

ಕಾಸಿಲ್ ಬಾರ್ಕರ್ ಎಂಬ ಮಾಜಿ ಪೊಲೀಸ್ ಅಧಿಕಾರಿ ಪ್ರಿಯತಮನೊಂದಿಗೆ ದಿನ ಕಳೆಯಲು 3 ವರ್ಷದ ಮಗುವನ್ನು ಕಾರಿನಲ್ಲಿಯೇ ಬಿಟ್ಟು ಹೋಗಿದ್ದರು. ಈ ವೇಳೆ ಕಾರಿನ ಗಾಜುಗಳನ್ನು ಸಂಪೂರ್ಣ ಕ್ಲೋಸ್ ಮಾಡಿದ್ದರು. ಸುಮಾರು 4 ಗಂಟೆ ನಂತರ ಹಿಂದಕ್ಕೆ ಬಂದಾಗ ಮಗುವಿನ ದೇಹದ ಉಷ್ಠಾಂಶ 107 ಡಿಗ್ರಿಗೆ ಏರಿಹೋಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ 2016ರಲ್ಲಿ ಮಗು ಚಾಯನ್ನೆ ಮೃತಪಟ್ಟಿತ್ತು. ಕಳೆದ ವರ್ಷವೇ ಈ ಪ್ರಕರಣ ನಡೆದಿದ್ದು ಅಧಿಕಾರಿಯನ್ನು ಬಂಧಿಸಿ ಸುದೀರ್ಘ ವಿಚಾರಣೆ ನಂತರ ಆರೋಪ ಸಾಬೀತಾಗಿದೆ. 20 ವರ್ಷದ ಕಠಿಣ ಶಿಕ್ಷೆ ನೀಡಬೇಕು ಎಂದು ವಾದ ಮುಂದಿಡಲಾಗಿದೆ.

Comments are closed.