ನಾಂಪೆನ್: ಮದುವೆಗೆ ಮುಂಚೆ ಸೆಕ್ಸ್? ಭಾರತದಂತಹಾ ಬಹುಪಾಲು ಸಂಪ್ರದಾಯವಾದಿ ಸಮಾಜದಲ್ಲಿ ಇದಕ್ಕೆ ಆಸ್ಪದ ಇಲ್ಲ. ಆದರೆ, ಈ ಊರಿನಲ್ಲಿ ಹಾಗಲ್ಲ. ಮದುವೆಗೆ ಮೊದಲು 9ರಿಂದ 13 ವಯಸ್ಸಿನೊಳಗಿನ ಹೆಣ್ಣು ಮಕ್ಕಳಿಗೆ ಸೆಕ್ಸ್ ರುಚಿ ತೋರಿಸುವ ಸಂಪ್ರದಾಯವೊಂದು ಚಾಲ್ತಿಯಲ್ಲಿದೆ. ಪುಟ್ಟ ಹೆಣ್ಣು ಮಕ್ಕಳಿಗೂ ರಾತ್ರಿಯ ಸಹಜೀವನದೊಂದಿಗೆ ತಮ್ಮ ತಮ್ಮ ಬಾಯ್ ಫ್ರೆಂಡ್ ಆಯ್ಕೆ ಮಾಡಿಕೊಳ್ಳುವ ಹಕ್ಕು ನೀಡುವ ಮೂಲಕ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ ಎಂಬುದು ಕಾಂಬೋಡಿಯಾದ ಕ್ರೆಯಂಗ್ ಬುಡಕಟ್ಟು ಜನರ ಬಲವಾದ ನಂಬಿಕೆ.
ಹೌದು, ಕೇಳಿದರೆ ಆಶ್ಚರ್ಯವಾದೀತು. ಇಲ್ಲಿ ಋತುಮತಿಯರಾಗುವ ತಮ್ಮ ಹೆಣ್ಣು ಮಕ್ಕಳಿಗೆ ಅಪ್ಪಂದಿರು ಇಂಥದ್ದೊಂದು ಸ್ವಾತಂತ್ರ್ಯ ನೀಡುತ್ತಾರೆ. ತಮ್ಮ ಮನೆಯ ಪಕ್ಕದಲ್ಲೇ ಪ್ರೀತಿಯ ಸೌಧವನ್ನು ಕಟ್ಟುವ ಮೂಲಕ, ಹೆಣ್ಣು ಮಕ್ಕಳು ತಮ್ಮಿಷ್ಟದ ಹುಡುಗರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ, ಪರಸ್ಪರ ಅರ್ಥ ಮಾಡಿಕೊಂಡು, ಭಾವೀ ಗಂಡನನ್ನು ಹುಡುಕಿಕೊಳ್ಳಲು ಆಸ್ಪದ ನೀಡುತ್ತಾರೆ. ಹಾಗಂತ ಒಬ್ಬನ ಜತೆಗೆ ಮಾತ್ರವೇ ಅಲ್ಲ, ಬೇರೆ ಬೇರೆ ಹುಡುಗರ ಜತೆ ಒಂದೊಂದು ರಾತ್ರಿ ಕಳೆಯುವ ಆಯ್ಕೆ ಈ ಹೆಣ್ಣು ಮಕ್ಕಳಿಗಿದೆ. ಆ ಬಳಿಕವೇ ತಮಗೆ ಯಾರು ಬೇಕೆಂದು ಅವರು ನಿರ್ಧರಿಸುತ್ತಾರೆ.
ಕಾಂಬೋಡಿಯಾದ ಈ ಊರಿನಲ್ಲಿ ಹೆಣ್ಣು ಮಕ್ಕಳು ‘ದೊಡ್ಡವರಾಗುವ’ ಹೊತ್ತಿಗೇ ಅವರಿಗೊಂದು ಲವ್ ಹಟ್ ಸಿದ್ಧವಾಗುತ್ತದೆ. ಈ ಬುಡಕಟ್ಟು ಜನಾಂಗದಲ್ಲಿ ಹಿಂದಿನಿಂದಲೂ ಬಂದ ಸಂಪ್ರದಾಯವಿದಂತೆ. ಆದರೆ, ಕಾಲಕ್ಕೆ ತಕ್ಕ ಬದಲಾವಣೆಯೆಂದರೆ, ಹಿಂದೆ ಗರ್ಭ ನಿರೋಧಕವಾಗಿ ಆಲ್ಕೋಹಾಲ್ ಕಾಕ್‌ಟೇಲ್ ಹಾಗೂ ಶತಪದಿ (ಚೇರಂಟೆಯಂತಹಾ ಹುಳ) ಬಳಸುತ್ತಿದ್ದರೆ, ಇಂದು ಅವರು ಕಾಂಡೋಮ್‌ಗಳನ್ನು ಬಳಸುತ್ತಾರೆ.
ಹೆಚ್ಐವಿ ಮತ್ತು ಏಡ್ಸ್‌ನಂತಹಾ ಕಾಯಿಲೆಗಳು ಹೆಚ್ಚಾಗಿರುವ ಈ ದೇಶದಲ್ಲಿ, ಮಕ್ಕಳನ್ನು ಲೈಂಗಿಕ ತೃಷೆ ಈಡೇರಿಸಿಕೊಳ್ಳಲು ಬಳಸಲಾಗುತ್ತದೆ ಎಂಬ ಆರೋಪಗಳ ನಡುವೆಯೇ, ಇಂಥದ್ದೊಂದು ಸಂಪ್ರದಾಯವು ಜೀವಂತವಾಗಿರುವುದು ಅಚ್ಚರಿ ಹುಟ್ಟಿಸುತ್ತದೆ.
ಡೈಲಿ ಮೇಲ್ ವರದಿ ಪ್ರಕಾರ, “ಈ ಲವ್ ಹಟ್‌ಗಳು ನಮಗೆ ಸ್ವಾತಂತ್ರ್ಯವನ್ನು ಒದಗಿಸುತ್ತವೆ ಮತ್ತು ನಮ್ಮ ನಿಜವಾದ ಪ್ರಿಯಕರನನ್ನು ಕಂಡುಕೊಳ್ಳಲು ಇದೊಂದು ಸೂಕ್ತವಾದ ಮಾರ್ಗ” ಎಂದು ನಂಗ್ ಚಾನ್ ಎಂಬ 17ರ ಹರೆಯದ ತರುಣಿ ಅಭಿಪ್ರಾಯಪಡುತ್ತಾಳೆ. ಆಕೆ ತನ್ನ ತಂದೆ ಕಟ್ಟಿಸಿಕೊಟ್ಟಿದ್ದ ಲವ್ ಹಟ್‌ನಲ್ಲೇ ವಾಸಿಸುತ್ತಿದ್ದಾಳೆ. ಅವಳ ಮುಂದಿನ ಮಾತು ಕೇಳಿ: “ನಾನು ಅವನನ್ನು ಪ್ರೀತಿಸುವುದನ್ನು ನಿಲ್ಲಿಸಿದರೆ ಮತ್ತು ಇನ್ನೊಬ್ಬ ಹೆಚ್ಚು ಸುಂದರನಾದ ಹುಡುಗ ಸಿಕ್ಕರೆ, ನಾನು ನನ್ನ ಹಿಂದಿನ ಬಾಯ್‌ಫ್ರೆಂಡ್ ಜತೆ ಸೆಕ್ಸ್‌ನಲ್ಲಿ ತೊಡಗಿಕೊಳ್ಳುವುದನ್ನು ನಿಲ್ಲಿಸುತ್ತೇನೆ”!
ಸ್ಥಳೀಯರ ಪ್ರಕಾರ, ಈ ಸಮುದಾಯದಲ್ಲಿ ವಿವಾಹ ವಿಚ್ಛೇದನ ಮತ್ತು ಲೈಂಗಿಕ ಹಿಂಸಾಚಾರಗಳು ಕಡಿಮೆ ಮತ್ತು ತಮಗೆ ಅನುಕೂಲಕರ ಎಂದು ತಿಳಿಯುವವರೊಂದಿಗೆ ಮಾತ್ರವೇ ಹೆಣ್ಣು ಮಕ್ಕಳು ಸಂಬಂಧ ಮುಂದುವರಿಸುತ್ತಾರಂತೆ.
Comments are closed.