ಜಗತ್ತಿನಾದ್ಯಂತ ಹಲವಾರು ಕಾರು ಕಂಪೆನಿಗಳು ಐಷರಾಮಿ ಕಾರುಗಳನ್ನು ಮಾರಾಟ ಮಾಡುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದರೆ ವಿಶೇಷವೆಂದರೆ ದುಬಾರಿ ಕಾರಿನ ಬೆಲೆಗಿಂತ ಕಾರಿನ ಕೀಗಳು ಮಾರಾಟವಾಗುತ್ತಿರುವುದು ಸದ್ಯದ ಟ್ರೆಂಡಿಂಗ್ ವಿಚಾರ. ಐಷಾರಾಮಿ ಕಾರುಗಳನ್ನು ಉತ್ಪಾದಿಸುವ ಬುಗಾಟಿ, ರೋಲ್ಸ್ ರಾಯ್ಸ್, ಬೆಂಟ್ಲಿ, ಮಸೆರಿಟಿ, ಮೆಕ್ಲೆರನ್ ಮುಂತಾದ ಕಾರುಗಳು ಕೋಟಿ ಬೆಲೆಯಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಆದರೆ ದುಬಾರಿ ಕಾರುಗಳನ್ನು ಹಿಂದಿಕ್ಕುವ ಕಾರಿನ ಕೀ ಬೆಲೆಯು ಅಚ್ಚರಿ ಉಂಟು ಮಾಡುವುದಲ್ಲಿ ಯಾವುದೇ ಸಂದೇಹವಿಲ್ಲ.
ಅವೈನ್ ಎಂಬ ಸಂಸ್ಥೆ ಐಷಾರಾಮಿ ಕಾರುಗಳ ಬೆಲೆಗೆ ತಕ್ಕಂತೆ ಕಾರಿನ ಕೀಯನ್ನು ವಿಭಿನ್ನವಾಗಿ ನಿರ್ಮಾಣಮಾಡಿ ಮಾರಾಟ ಮಾಡುತ್ತಿದೆ. ಕಾರುಗಳ ಬೆಲೆಗೆ ತಕ್ಕಂತೆ ಮತ್ತು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 3 ಲಕ್ಷದಿಂದ 4 ಕೋಟಿಯಷ್ಟು ಬೆಲೆಬಾಳುವ ಕಾರಿನ ಕೀ ಮಾದರಿಗಳನ್ನು ಅವೈನ್ ಸಂಸ್ಥೆ ಉತ್ಪಾದಿಸುತ್ತಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಈಬಾರಿ ಸುಮಲತಾ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ: ಜಗದೀಶ್ ಶೆಟ್ಟರ್
ಅವೈನ್ ಸಂಸ್ಥೆ ತಯಾರಿಸುವ ಕಾರು ಕೀಗಳಿಗೆ ಉತ್ಕೃಷ್ಟ ಗುಣಮಟ್ಟದ ಬಂಗಾರ ಮತ್ತು ವಜ್ರದ ಹರಳು ಉಪಯೋಗಿಸಲಾಗುತ್ತಿದ್ದು, ಕಾರಿನ ಬೆಲೆಗೆ ತಕ್ಕಂತೆ ಕೀಗಳನ್ನು ಮಾರಾಟ ಮಾಡುತ್ತಿದೆ.
ಅವೈನ್ ಸಂಸ್ಥೆಯ ತಯಾರಿಸುತ್ತಿರುವ ಕಾರು ಕೀ ಸಂಪೂರ್ಣ ಕೈ ಕೌಶಲ್ಯದಿಂದ ಸಿದ್ಧಪಡಿಸಲಾಗುತ್ತಿದ್ದು, ಕೀ ಮೇಲ್ಬಾಗದಲ್ಲಿ ಬಂಗಾರದ ಕವಚ ಮತ್ತು ವಜ್ರದ ಹರಳುಗಳಿಂದ ವಿನ್ಯಾಸ ಮಾಡಲಾಗುತ್ತದೆ
Comments are closed.