ಬೀಜಿಂಗ್: ಹೋಟೆಲ್‍ನಲ್ಲಿ ಬಿಲ್ ಕಟ್ಟಲು 10 ರೂ. ಕಡಿಮೆಯಾಗಿದಕ್ಕೆ ತಂದೆಯೊಬ್ಬ ತನ್ನ 2 ವರ್ಷದ ಮಗುವನ್ನೇ ಅಡವಿಟ್ಟ ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದ್ದು, ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಹೋಟೆಲ್‍ನಲ್ಲಿ ಊಟ ಮಾಡಿದ್ದ ಬಿಲ್ 62 ರೂ. ಆಗಿತ್ತು. ಆದ್ರೆ ಹಣ ಕಟ್ಟುವಾಗ 10 ರೂ. ಕಡಿಮೆಯಾಗಿದೆ. ಆಗ ತಂದೆ ತನ್ನ 2 ವರ್ಷದ ಮಗಳನ್ನೇ ಅಡವಿಡಲು ನಿರ್ಧರಿಸಿದ್ದಾನೆ. ಅಲ್ಲದೆ ಮರುದಿನ ಬಂದು ಹಣ ನೀಡಿ ಮಗಳನ್ನು ಕರೆದುಕೊಂಡು ಹೋಗುವುದಾಗಿ ಹೋಟೆಲ್ ಸಿಬ್ಬಂದಿ ಬಳಿ ಹೇಳಿದ್ದಾನೆ.
ಈ ತಂದೆ ತನ್ನ ಮಗಳನ್ನು ಅಡವಿಟ್ಟ ದೃಶ್ಯವು ಹೋಟೆಲ್‍ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ಅಡವಿಟ್ಟು ತಂದೆ ಹೋಟೆಲ್‍ನಿಂದ ಹೊರಹೋಗುತ್ತಿದ್ದಾಗ ಮಗು ಅಪ್ಪನ ಬಳಿ ಅಳುತ್ತ ಓಡಿ ಬಂದರೂ, ತಂದೆ ಮತ್ತೆ ಮಗಳನ್ನು ಹೋಟೆಲ್‍ನೊಳಗೆ ಬಿಟ್ಟು ಹೋಗಿದ್ದಾನೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ, ಹೋಟೆಲ್ ಅವರು ಮಗುವಿಗೆ ಆಹಾರ ಹಾಗು ಒಂದು ಬಾಟಲ್ ಸೋಯಾ ಹಾಲು ನೀಡಿ ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ಆದ್ರೆ ಮರುದಿನ ತಂದೆ ಮಗುವನ್ನು ಕರೆದುಕೊಂಡು ಹೋಗಲು ಬಂದಿಲ್ಲ. ಆದ್ದರಿಂದ ಹೋಟೆಲ್ ಅವರು ಮಗುವನ್ನು ಪೊಲೀಸರಿಗೆ ಒಪ್ಪಿಸಿ, ನಡೆದ ವಿಷಯವನ್ನು ತಿಳಿಸಿದ್ದಾರೆ. ಬಳಿಕ ತಂದೆಯನ್ನು ಪತ್ತೆ ಹಚ್ಚಿ ಮಗುವನ್ನು ಆತನಿಗೆ ನೀಡಿ ಬುದ್ಧಿ ಮಾತು ಹೇಳಿ ಪೊಲೀಸರು ಕಳುಹಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
Comments are closed.