ವಾಷಿಂಗ್ಟನ್ ಡಿಸಿ: ಫೇಸ್‌ಬುಕ್ ಹಾಗೂ ಇನ್ನಿತರ ಸಾಮಾಜಿಕ ತಾಣಗಳ ಬಳಕೆ ನಿಮ್ಮನ್ನು ಒತ್ತಡಯುಕ್ತ ಮನಸ್ಥಿತಿಗೆ ತಳ್ಳುತ್ತದೆ !
ಕೆಲವೊಂದು ಸನ್ನಿವೇಶಗಳಲ್ಲಿ ಸಾಮಾಜಿಕ ತಾಣಗಳು ನಿಮ್ಮ ಮನಸ್ಸನ್ನು ಸಾಕಷ್ಟು ಸುಧಾರಣೆ ಅಥವಾ ರಿಲೀಫ್ ಗೆ ಕಾರಣವಾಗುತ್ತದೆ. ಆದರೆ ಇವುಗಳೇ ಮುಂದಿನ ದಿನದಲ್ಲಿ ನಿಮ್ಮನ್ನು ಪ್ರತಿಯೊಂದಕ್ಕೂ ಮತ್ತೊಬ್ಬರನ್ನು ಅಥವಾ ಸಾಮಾಜಿಕ ತಾಣಗಳನ್ನು ಅವಲಂಬಿಸುವಂತೆ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಸಂಶೋಧನೆಗಾಗಿ ಆನ್‌ಲೈನ್ ಸರ್ವೇ ನಡೆಸಲಾಗಿದ್ದು 18-56 ವರ್ಷದವರಿಂದ ವಿವಿಧ ಬಗೆಯ ಮಾಹಿತಿಗಳನ್ನು ಕಲೆಹಾಕಲಾಗಿದೆ.
ಸಂಶೋಧನಾ ಸಮೀಕ್ಷೆಯಲ್ಲಿ ಹೆಚ್ಚು ಮಂದಿ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಲಾಗಿದ್ದು, ಈ ವಿದ್ಯಮಾನಗಳಲ್ಲಿ ಅವರ ಅನುಭವ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ ಎಂದು ಮುಖ್ಯ ಸಂಶೋಧಕರಾದ ಜುಲಿಯಾ ಹೇಳಿದ್ದಾರೆ.
ಹೆಚ್ಚಾಗಿ ವಿದ್ಯಾರ್ಥಿಗಳಿಗೆ ಕಲಿಕೆಯ ಒತ್ತಡದಲ್ಲಿರುವ ಹಿನ್ನೆಲೆಯಲ್ಲಿ ಅವರು ಹೊಸ ಬಗೆಯ ಸಾಮಾಜಿಕ ತಾಣಗಳು, ಸಂಬಂಧಗಳನ್ನು ಬಲು ಬೇಗನೇ ಅಳವಡಿಸಿಕೊಳ್ಳುತ್ತಾರೆ. ಮನೆ ಹಾಗೂ ಮನೆ ಮಂದಿಯಿಂದ ದೂರವಾಗಲು ಹೆಚ್ಚು ಬಯಸುತ್ತಾರೆ ಎಂದು ಮಾನಸಿಕ ಆರೋಗ್ಯ ಸಂಶೋಧನೆಗೆ ಸಂಬಂಧಿತ ನಿಯತಕಾಲಿಕದಲ್ಲಿ ಈ ವಿಚಾರ ಪ್ರಕಟವಾಗಿದೆ.
ದಿನ ನಿತ್ಯ ಸಾಮಾಜಿಕ ತಾಣಗಳಲ್ಲಿ ಕಳೆಯುವ ಸಮಯದ ಬಗ್ಗೆ ಸಮೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಬಂದ ಉತ್ತರದಲ್ಲಿ, ಹೆಚ್ಚು ಒತ್ತಡಕ್ಕೆ ಒಳಗಾದ ದಿನ ಹೆಚ್ಚು ಹೊತ್ತು ಸಾಮಾಜಿಕ ತಾಣಗಳಲ್ಲಿ ಮಕ್ಕಳು ಕಳೆಯುತ್ತಾರೆ ಎಂದು ತಿಳಿದು ಬಂದಿದೆ.
ಇದನ್ನು ಅಡಿಕ್ಷನ್ ಅಥವಾ ಸಾಮಾಜಿಕ ತಾಣಕ್ಕೆ ಅವಲಂಬಿತವಾಗುವುದು ಎನ್ನುತ್ತಾರೆ. ಮಾನಸಿಕವಾಗಿ ಹೆಚ್ಚು ಒತ್ತಡಕ್ಕೆ ಒಳಗಾದಲ್ಲಿ, ಫೇಸ್‌ಬುಕ್ ಹಾಗೂ ಇನ್ನಿತರ ಸಾಮಾಜಿಕ ತಾಣಗಳಲ್ಲಿ ಕಳೆಯುವ ಸಮಯದ ಅವಧಿಯೂ ಹೆಚ್ಚಾಗುತ್ತದೆ ಎಂಬುದು ಸಂಶೋಧನೆಯಲ್ಲಿ ತಿಳಿಸುಕೊಳ್ಳಲಾಗಿದೆ. ಈ ಹಂತದಲ್ಲಿ ಸರಿಯಾದ ರೀತಿಯಲ್ಲಿ ಮನೆಮಂದಿಯ ಹಾಗೂ ಸ್ನೇಹಿತರ ಪ್ರೋತ್ಸಾಹ, ಮಾರ್ಗದರ್ಶನದಿಂದ ಸರಿಪಡಿಸಬಹುದು ಎಂದು ಹೇಳಲಾಗಿದೆ.
Comments are closed.