ಅಂತರಾಷ್ಟ್ರೀಯ

‘ಕಿತನಾ ಅಚ್ಚೇ ಹೆ ಮೋದಿ’ ಎಂದ ಆಸ್ಟ್ರೇಲಿಯಾದ ಪ್ರಧಾನಿ

Pinterest LinkedIn Tumblr

ಒಸಾಕಾ: ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಶನಿವಾರ ಭಾರತ ಪ್ರಧಾನಿ ನರೇಂದ್ರ ಮೋದಿ ಯವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಟ್ವೀಟ್ ಮಾಡಿದ್ದಾರೆ. ಅದೇ ವೇಳೆ ಸ್ಕಾಟ್ ಭಾರತ ಪಿಎಂ ಅನ್ನು ಹಿಂದಿಯಲ್ಲಿ ಹೊಗಳಿದ್ದಾರೆ.

“ಕಿತನಾ ಅಚ್ಚಾ ಹೇ ಮೋದಿ” ಎಂದು ಹೇಳಿರುವ ಸ್ಕಾಟ್ ತಾವು ಹಾಗೂ ಮೋದಿಯವರು ಜತೆಯಾಗಿರುವ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ.

ಜಪಾನ್ ನ ಒಸಾಕಾದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯಲ್ಲಿ ಇಬ್ಬರೂ ನಾಯಕರು ಭಾಗವಹಿಸಿದ್ದಾರೆ.

ನೂತನವಾಗಿ ಆಯ್ಕೆಯಾಗಿರುವ ಆಸ್ಟ್ರೇಲಿಯಾ ಪ್ರಧಾನಿ ಬೆಳಿಗ್ಗೆ ತಮ್ಮ ಭಾರತೀಯ ಸಹವರ್ತಿಯನ್ನು ಭೇಟಿಯಾದರು. ಆ ವೇಳೆ ಅವರೊಡನೆ ಕೆಲ ಕ್ಷಣಗಳನ್ನುಕಳೆದಿದ್ದಾರೆ.

Comments are closed.