ಲಂಡನ್ (ಜೂ.30): ಅರಬ್ ಸಂಯುಕ್ತ ಸಂಸ್ಥಾನದ ಪ್ರಧಾನಿ ಮೊಹ್ಮದ್ ಬಿನ್ ರಶಿದ್ ಅಲ್ ಮಕ್ತೋಮ್ ಪತ್ನಿ ಹಾಗೂ ರಾಜಕುಮಾರಿ ಹಯಾ ಬಿಂತ್ ಅಲ್ ಹುಸೇನ್ 270 ಕೋಟಿ ರೂ. ಹಣದ ಜೊತೆ ದೇಶ ಬಿಟ್ಟು ಲಂಡನ್ಗೆ ತೆರಳಿದ್ದಾರೆ.
ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಆಗಿರುವ ಮೊಹ್ಮದ್ ಪತ್ನಿ ಹಯಾ ಲಂಡನ್ನಲ್ಲಿ ತಲೆಮರಿಸಿಕೊಂಡಿದ್ದಾರೆ ಎನ್ನಲಾಗಿದೆ. ಅವರು ಮಕ್ಕಳಾದ ಜಲಿಲಾ (11), ಜಯೀದ್ (7) ಜೊತೆ ಮೊದಲು ಜರ್ಮನಿಗೆ ತೆರಳಿದ್ದರು. ಈ ವೇಳೆ ಅವರ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಆಗ ಹೆಂಡತಿಯನ್ನು ಮರಳಿ ಕಳುಹಿಸುವಂತೆ ಮೊಹಮದ್ ಜರ್ಮನ್ ಅಧಿಕಾರಿಗಳ ಬರಿ ಕೋರಿದ್ದರು. ಆದರೆ, ಅವರು ಈ ಮನವಿಯನ್ನು ತಿರಸ್ಕರಿಸಿದ್ದರು.
ಈಗ ಲಂಡನ್ಗೆ ತೆರಳಲು ಜರ್ಮನಿ ಅಧಿಕಾರಿಗಳೇ ಸಹಕಾರ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಅಲ್ಲಿನ ಮಾಧ್ಯಮಗಳು ಸಾಕಷ್ಟು ವರದಿ ಮಾಡಿವೆ. ಆದರೆ, ಈ ಬಗ್ಗೆ ಜರ್ಮನಿ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಮೇ 20ರ ನಂತರ ಹಯಾ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಸದಾ ಕೆಲಸ ಕಾರ್ಯಗಳ ಫೋಟೋದಿಂದ ತುಂಬಿರುತ್ತಿದ್ದ ಅವರ ಸಾಮಾಜಿಕ ಜಾಲತಾಣ ಖಾತೆ ಫೆಬ್ರವರಿಯಿಂದ ಡಿ-ಆ್ಯಕ್ಟಿವೇಟ್ ಆಗಿದೆ. ಈ ಬಗ್ಗೆ ಅನೇಕ ಚರ್ಚೆಗಳು ಕೂಡ ನಡೆದಿದ್ದವು.
Comments are closed.