ನ್ಯೂಯಾರ್ಕ್: ಫೇಸ್ಬುಕ್ನಲ್ಲಿ ಪರಿಚಯವಾದ 14 ವರ್ಷದ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ದುರುದ್ದೇಶದಿಂದ ಅಮೆರಿಕ ಮೂಲದ ವ್ಯಕ್ತಿಯೊಬ್ಬ ಇಂಡಿಯನಾಪೊಲಿಸ್ ಸಬರ್ಬ್ನಿಂದ ವಿಸ್ಕಾನ್ಸಿನ್ ನರಗದವರೆಗೂ ಸುಮಾರು 565 ಕಿ.ಮೀ ನಡೆದುಕೊಂಡು ಹೋಗಿ, ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವುದಾಗಿ ಅಮೆರಿಕದ ಅಟಾರ್ನಿ ಕಚೇರಿ ಮಾಹಿತಿ ನೀಡಿದೆ.
ಆರೋಪಿ ಟಾಮಿ ಲೀ ಜೆಂಕಿನ್ಸ್(32) ವಿರುದ್ಧ ಪ್ರಕರಣ ದಾಖಲಾಗಿದ್ದು, ಕಂಪ್ಯೂಟರ್ ಮೂಲಕ ಅಪ್ರಾಪ್ತೆಯ ಮನವೊಲಿಸಿ, ಆಕೆಯನ್ನು ಕಾನೂನುಬಾಹಿರ ಲೈಂಗಿಕತೆಯಲ್ಲಿ ತೊಡಗುವಂತೆ ಪ್ರೇರೆಪಿಸಲು ಯತ್ನಿಸಿದ ಆರೋಪದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಲೇ ಅಪ್ರಾಪ್ತೆಯರೊಂದಿಗೆ ದುರ್ವತನೆ ತೋರಿದ ಸಾಕಷ್ಟು ಪ್ರಕರಣಗಳೂ ಈತನ ಮೇಲಿದೆ.
ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ ಪ್ರಕಾರ, ಆರೋಪಿ ಜೆಂಕಿನ್ಸ್ ವಿಸ್ಕಾನ್ಸಿನ್ ನಗರದ ನೀನಾಹ್ ಪ್ರದೇಶದಲ್ಲಿ ವಾಸಿಸುತ್ತಿರುವ ಅಪ್ರಾಪ್ತೆಯೊಂದಿಗೆ ಫೇಸ್ಬುಕ್ ಮೆಸೇಜ್ ಮಾಡಲು ಆರಂಭಿಸಿದ. ಅಪ್ರಾಪ್ತೆಗೆ ಸಂದೇಶ ಕಳುಹಿಸುತ್ತಿದ್ದ ಆತ ತನ್ನ ಪ್ರಭಾವವನ್ನು ಆಕೆಯ ಮೇಲೆ ಬೀರಲು ಪ್ರಾರಂಭಿಸಿದ. ಹೇಗಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಯೋಜನೆ ರೂಪಿಸಿದ್ದ ಆತ ಅಪ್ರಾಪ್ತೆಯ ಬಳಿ ನಗ್ನ ಫೋಟೋಗಳನ್ನು ಕಳಿಸುವಂತೆ ಬೇಡಿಕೆ ಇಟ್ಟಿದ್ದ. ಈತನ ಬೇಡಿಕೆಗಳನ್ನು ಹಲವು ಬಾರಿ ಅಪ್ರಾಪ್ತೆ ನಿರಾಕರಿಸಿದಾಗ, ಆಕೆಯನ್ನು ಭೇಟಿ ಮಾಡಲು ನಿರ್ಧರಿಸಿ 351 ಮೈಲಿ ಅಂದರೆ ಬರೋಬ್ಬರಿ 565 ಕಿ.ಮೀ ನಡೆದುಕೊಂಡು ಹೋಗಿದ್ದಾನೆ. ದಾರಿಯುದ್ದಕ್ಕೂ ಆರೋಪಿ ಅಪ್ರಾಪ್ತೆಗೆ ಲೈಂಗಿಕತೆ ಕುರಿತಾದ ಸಂದೇಶಗಳನ್ನೇ ರವಾನಿಸಿದ್ದಾನೆ.
ಅಕ್ಟೋಬರ್ 10ರಂದು ಮಿಲ್ವುಕೀ ಪ್ರದೇಶಕ್ಕೆ ಬಂದಿಳಿದ ಜಂಕಿನ್ಸ್ಗೆ ಅಲ್ಲಿನ ಸ್ಥಳೀಯರೊಬ್ಬರು ನಿನಾಹ್ಗೆ ತೆರಳಲು ಬಸ್ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೆ, ಈಗಾಗಲೇ ನನನ್ನು ಖೆಡ್ಡಾಗೆ ಬೀಳಿಸಲು ಎಲ್ಲವೂ ತಯಾರಾಗಿದೆ ಎಂಬ ಅರಿವು ಆತನಿಗೆ ಇರಲಿಲ್ಲ. ಏಕೆಂದರೆ ಆತ ಬರುವುದನ್ನು ತಿಳಿದಿದ್ದ ಅಪ್ರಾಪ್ತೆ ವಿನ್ನೆಬಾಗೋ ಕೌಂಟಿಯಲ್ಲಿರುವ ಚಿಲ್ಡ್ರನ್ ಟಾಸ್ಕ್ ಪೋರ್ಸ್ಗೆ ದೂರು ನೀಡಿದ್ದಳು.
ಯಾವಾಗ ಆರೋಪಿ ಜಂಕಿನ್ಸ್ ವಿನ್ನೆಬಾಗೋ ಕೌಂಟಿಗೆ ಆಗಮಿಸಿದನೋ ಆತನಿಗಾಗಿ ಕಾದು ಕುಳಿತಿದ್ದ ಅಲ್ಲಿನ ಅಧಿಕಾರಿಗಳು ಆತನನ್ನು ತಮ್ಮ ಬಲೆಗೆ ಕೆಡವಿಕೊಂಡಿದ್ದಾರೆ. ಸದ್ಯ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನ್ನ ಕೃತ್ಯಕ್ಕೆ ಸುಮಾರು 10 ವರ್ಷ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾನೆ. 8 ವರ್ಷದ ಬಾಲಕನನ್ನೂ ಲೈಂಗಿಕತೆಗೆ ಪ್ರೇರೆಪಸಿದ ಆರೋಪವೂ ಈತನ ಮೇಲಿದೆ.
Comments are closed.