ಟ್ಯಾಕ್ಸಿಯಲ್ಲಿ ಆಸ್ಪತ್ರೆಯತ್ತ ಧಾವಿಸುವ ಸಂದರ್ಭದಲ್ಲಿ ವಿಪರೀತ ಪ್ರಸವ ವೇದನೆಯಲ್ಲಿದ್ದ ಇಂಡೋನೇಷ್ಯಾದ ಮಹಿಳೆಯೊಬ್ಬರ ನೆರವಿಗೆ ಧಾವಿಸಿ, ಆಕೆಯ ಜೊತೆ ನಿಂತ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರ ಮಾನವೀಯ ಕಥೆ ನೆಟ್ಟಿಗರ ಮನಗೆದ್ದಿದೆ.
ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಮಾರ್ಗದಲ್ಲಿ ಟ್ಯಾಕ್ಸಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆಗೆ ಪ್ರಸವದ ಸಂದರ್ಭದಲ್ಲಿ ನೆರವಾದ 27 ವರ್ಷದ ಕೋಮತಿ ನಾರಾಯಣ್‌ರ ಹೆಸರನ್ನು ಮಗುವಿಗೆ ಇಡಲಾಗಿದೆ.
ಮಹಿಳಾ ಪೊಲೀಸ್‌ನೊಂದಿಗೆ ಟ್ಯಾಕ್ಸಿ ಚಾಲಕನ ಈ ಮಾನವೀಯತೆಯನ್ನು ಮೆಚ್ಚಿ ಇಲ್ಲಿನ ಪೊಲೀಸ್ ವರಿಷ್ಠರು ಶ್ಲಾಘನಾ ಪತ್ರವನ್ನು ನೀಡಿದ್ದಾರೆ.
Comments are closed.