ವಾಷಿಂಗ್ಟನ್: ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರುವ ಉದ್ಯಮ ಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತ 14 ಸ್ಥಾನಗಳ ಏರಿಕೆ ಕಂಡು 63ನೇ ಸ್ಥಾನದಲ್ಲಿದೆ.
ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ಮತ್ತು ಇತರ ಸುಧಾರಣಾ ಕ್ರಮಗಳು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಸುಲಭವಾಗಿ ಉದ್ಯಮ ನಡೆಸಬಹುದಾದ ದೇಶಗಳ ಪೈಕಿ ಪ್ರಮುಖ 10 ದೇಶಗಳ ಪಟ್ಟಿಯಲ್ಲಿ ಕೂಡ ಸತತ ಮೂರನೇ ಬಾರಿಗೆ ಭಾರತ ಸ್ಥಾನ ಭದ್ರಪಡಿಸಿಕೊಂಡಿದೆ.
ಭಾರತ ದೇಶದ ಆರ್ಥಿಕತೆ ಕುಸಿಯುತ್ತಿದೆ ಎಂದು ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೀಗೆ ಹಲವು ದೇಶಗಳು ಎಚ್ಚರಿಕೆ ನೀಡಿರುವ ಸಂದರ್ಭದಲ್ಲಿ ವಿಶ್ವಬ್ಯಾಂಕಿನ ಈ ರ್ಯಾಂಕಿಂಗ್ ಪಟ್ಟಿ ಹೊರಬಿದ್ದಿರುವುದು ಭಾರತದ ಅರ್ಥ ವ್ಯವಸ್ಥೆ ಮೇಲೆ ಆಶಾವಾದ ಇರಿಸಿಕೊಳ್ಳುವಂತೆ ಮಾಡಿದೆ.
2014ರಲ್ಲಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ವಿಶ್ವದ ಉದ್ಯಮಸ್ನೇಹಿ 190 ದೇಶಗಳ ಪೈಕಿ ಭಾರತ 142ನೇ ಸ್ಥಾನದಲ್ಲಿತ್ತು. ಹಲವು ಸುಧಾರಣಾ ಕ್ರಮಗಳಿಂದಾಗಿ ಕಳೆದ ವರ್ಷ ಭಾರತ 100ನೇ ಸ್ಥಾನಕ್ಕೇರಿತ್ತು. ಅದರ ಹಿಂದಿನ ವರ್ಷ ಅಂದರೆ 2017ರಲ್ಲಿ 130ನೇ ಸ್ಥಾನದಲ್ಲಿದ್ದು ಇರಾನ್ ಮತ್ತು ಉಗಾಂಡ ದೇಶಗಳಿಂದ ಹಿಂದೆ ಇತ್ತು.
Comments are closed.