ಇಸ್ಲಾಮಾಬಾದ್: ಕರ್ತಾಪುರ್ ಸಾಹೀಬ್ ಗೆ ಭೇಟಿ ನೀಡಲಿರುವ ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್ ಪೋರ್ಟ್ ಅಗತ್ಯವಿಲ್ಲ, ಗುರುತುಪತ್ರ ಮಾತ್ರ ಕಡ್ಡಾಯ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದು, ಇದೀಗ ಉಲ್ಟಾ ಹೊಡೆದಿದ್ದು, ಭಾರತೀಯರಿಗೆ ಪಾಸ್ ಪೋರ್ಟ್ ಅಗತ್ಯವಿದೆ ಎಂದು ತಿಳಿಸಿದೆ.
ನಾರೋವಾಲ್ ಜಿಲ್ಲೆಯಲ್ಲಿರುವ ಕರ್ತಾಪುರ್ ಗುರುದ್ವಾರ ದರ್ಬಾರ್ ಸಾಹಿಬ್ ಗೆ ಭೇಟಿ ನೀಡಲಿರುವ ಭಾರತೀಯ ಯಾತ್ರಾರ್ಥಿಗಳ ಮೇಲೆ ವಿಧಿಸಿರುವ ಷರತ್ತುಗಳಿಗೆ ವಿನಾಯ್ತಿ ನೀಡಲಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಖಾನ್ ಘೋಷಿಸಿದ್ದರು.
ಆದರೆ ಬಾಬಾ ಗುರು ನಾನಕ್ ಅವರು 550ನೇ ಜನ್ಮ ಜಯಂತಿ ಹಿನ್ನೆಲೆಯಲ್ಲಿ ಕರ್ತಾಪುರ್ ಸಾಹೀಬ್ ಗೆ ತೆರಳಲಿರುವ ಭಾರತೀಯ ಯಾತ್ರಾರ್ಥಿಗಳು ಗೊಂದಲಕ್ಕೆ ಈಡಾಗಿದ್ದಾರೆ. ಅದಕ್ಕೆ ಕಾರಣವಾಗಿದ್ದು, ಪಾಕಿಸ್ತಾನ ಆರ್ಮಿಯ ಮೇಜರ್ ಜನರಲ್ ಅಸೀಫ್ ಗಫೂರ್ ಅವರು ಯಾತ್ರಾರ್ಥಿಗಳಿಗೆ ಪಾಸ್ ಪೋರ್ಟ್ ಅಗತ್ಯವಿದೆ ಎಂದು ತಿಳಿಸಿರುವುದು.
Comments are closed.