ಕಜಕಿಸ್ತಾನ: ಕಜಕಿಸ್ತಾನದ ಅಲ್ಮಾಟಿ ನಗರದ ಬಳಿ ವಿಮಾನ ಪತನಗೊಂಡು ಸುಮಾರು 9 ಮಂದಿ ಪ್ರಯಾಣಿಕರು ಅಸುನೀಗಿದ್ದಾರೆ. ವಿಮಾನದಲ್ಲಿ 95 ಮಂದಿ ಪ್ರಯಾಣಿಕರು ಹಾಗೂ 5 ಜನ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ಮಧ್ಯ ಏಷ್ಯಾ ರಾಷ್ಟ್ರದ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಪತನಕ್ಕೀಡಾದ ವಿಮಾನವು ರಾಜಧಾನಿ ನೂರ್-ಸುಲ್ತಾನ್ಗೆ ಹಾರಾಟ ನಡೆಸುತ್ತಿತ್ತು. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವೇಳೆ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇಕ್ ಏರ್ಲೈನ್ಸ್ಗೆ ಸೇರಿದ ವಿಮಾನ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, ಇನ್ನು ಬದುಕುಳಿದ ಪ್ರಯಾಣಿಕರನ್ನು ರಕ್ಷಿಸಲಾಗುತ್ತಿದೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Comments are closed.