ಅಂತರಾಷ್ಟ್ರೀಯ

ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ­ ಆರಂಭವಾಗುತ್ತಿದ್ದಂತೆಯೇ ಸ್ವದೇಶಕ್ಕೆ ಮರಳಿದ 445 ಬಾಂಗ್ಲಾದೇಶಿಯರು

Pinterest LinkedIn Tumblr


ಢಾಕಾ: ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ­ಯನ್ನು ದೇಶಾದ್ಯಂತ ಜಾರಿಗೊಳಿಸುವು­ದಾಗಿ ಭಾರತ ಪ್ರಕಟಿಸಿದ ಬೆನ್ನಲ್ಲಿಯೇ 445 ಬಾಂಗ್ಲಾದೇಶಿಯರು ಸ್ವದೇಶಕ್ಕೆ ಮರಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಬಾಂಗ್ಲಾ­ದೇಶದ ಬಾರ್ಡರ್‌ ಗಾರ್ಡ್‌ ಬಾಂಗ್ಲಾದೇಶ (ಬಿಜಿಬಿ) ಮಹಾನಿರ್ದೇಶಕ ಮೇಜರ್‌ ಜನರಲ್‌ ಮೊಹಮದ್‌ ಷಫೀನುಲ್‌ ಇಸ್ಲಾಂ ಅವರು, ”2019ರಲ್ಲಿ ಸುಮಾರು 1,000 ಜನ ಗಡಿ ದಾಟಿ ಭಾರತ ಪ್ರವೇಶಿಸಿದ್ದಾರೆ. ಆ ಪೈಕಿ ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿ 445 ಮಂದಿ ಸ್ವದೇಶಕ್ಕೆ ಮರಳಿದ್ದಾರೆ. ಸ್ಥಳೀಯ ಪ್ರತಿನಿಧಿಗಳ ಮೂಲಕ ಅವರ ಗುರುತು ದೃಢಪಡಿಸಿಕೊಂಡು ದೇಶದೊಳಕ್ಕೆ ಬರ ಮಾಡಿಕೊಳ್ಳಲಾ­ಗಿದೆ,” ಎಂದು ಇಸ್ಲಾಂ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಜತೆಗಿನ ದ್ವಿಪಕ್ಷೀಯ ಮಾತುಕತೆಗಾಗಿ ಕಳೆದ ವಾರ ಭಾರತಕ್ಕೆ ಭೇಟಿ ನೀಡಿದ್ದ ಅವರು ಎನ್‌ಆರ್‌ಸಿ ಕುರಿತು ಸರಕಾರದಿಂದ ಮಾಹಿತಿ ಪಡೆದಿದ್ದರು. ಬಳಿಕ, ”ಇದು ಭಾರತದ ಆಂತರಿಕ ಪ್ರಕ್ರಿಯೆ. ಈ ಕುರಿತು ನಾವು ಆತಂಕಪಡುವ ಅಗತ್ಯವಿಲ್ಲ,” ಎಂದು ಹೇಳಿದ್ದರು. ಭಾರತ-ಬಾಂಗ್ಲಾಒಟ್ಟು 4,096 ಕಿ.ಮೀ ಉದ್ದದ ಗಡಿ ಹಂಚಿಕೊಂಡಿವೆ.

ಬಾಂಗ್ಲಾಕ್ಕೆ ಮಾಹಿತಿ: ಎನ್‌ಆರ್‌ಸಿ ಕುರಿತು ಬಾಂಗ್ಲಾದೇಶಕ್ಕೆ ಸಂಪೂರ್ಣ ಮಾಹಿತಿ ನೀಡಲಾ­ಗಿದ್ದು, ಕಳವಳ ಪಡುವ ಅಗತ್ಯವಿಲ್ಲವೆಂದು ಭರವಸೆ ನೀಡಲಾಗಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.

Comments are closed.