ಅಂತರಾಷ್ಟ್ರೀಯ

ಫೋಟೋಗಳನ್ನು ಕದಿಯುವ ಈ ಆ್ಯಪ್ ಗಳನ್ನು Uninstall ಮಾಡಿ

Pinterest LinkedIn Tumblr


ನ್ಯೂಯಾರ್ಕ್: ಗೂಗಲ್ ಮತ್ತು ಅ್ಯಪಲ್ ಪ್ಲೇ ಸ್ಟೋರ್ ಇತ್ತೀಚಿಗೆ ಹಲವಾರು ನಕಲಿ ಆ್ಯಪ್ ಗಳನ್ನು ತನ್ನ ಸ್ಟೋರ್ ನಿಂದ ತೆಗೆದು ಹಾಕಿತ್ತು. ಬಳಕೆದಾರರ ಖಾಸಗಿ ಮಾಹಿತಿಗಳಿಗೆ ಕನ್ನ ಹಾಕುವ ಮತ್ತು ಅನಾವಶ್ಯಕ ಜಾಹೀರಾತುಗಳನ್ನು ನೀಡುವ ಇಂತಹ ಆ್ಯಪ್ ಗಳು ಹ್ಯಾಕರ್ ಗಳಿಗೆ ವರದಾನವಾಗುತ್ತಿದ್ದವು. ಅದರೀಗ ಗೂಗಲ್ ಬಳಕೆದಾರರ ಫೋಟೋ ಗಳನ್ನು ಕದಿಯುವ ಆ್ಯಪ್ ಗಳ ಪಟ್ಟಿಯನ್ನು ಸಿದ್ದಪಡಿಸಿದೆ.

ಹೌದು ! ಗೂಗಲ್ ಅಪಾಯಕಾರಿ ಆ್ಯಂಡ್ರಾಯ್ಡ್ ಆ್ಯಪ್ ಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು ಇವುಗಳಲ್ಲಿ ಫೋಟೋ ಗಳನ್ನು ಕದಿಯುವ ಆ್ಯಪ್ ಗಳೇ ಹೆಚ್ಚಾಗಿವೆ. ಮಾತ್ರವಲ್ಲದೆ ಬಳಕೆದಾರರ ಫೋಟೋ ಗಳನ್ನು ಬಳಸಿಕೊಂಡು ಬೇರೆ ಬೇರೆ ಕೃತ್ಯಗಳಿಗೆ ಅವುಗಳನ್ನು ಬಳಸಿಕೊಳ್ಳುತ್ತಿವೆ ಎಂದು ವರದಿ ಮಾಡಿದೆ. ಅಂತಹ ಆ್ಯಪ್ ಗಳ ಪಟ್ಟಿ ಇಲ್ಲಿದೆ.

ಸೆಲ್ಫಿ ಕ್ಯಾಮಾರ ಪ್ರೊ ಆ್ಯಪ್, ಪ್ರೊ ಕ್ಯಾಮಾರ ಬ್ಯೂಟಿ ಆ್ಯಪ್ , ಪ್ರಿಜ್ಮಾ ಫೋಟೋ ಎಫೆಕ್ಟ್ , ಫೋಟೋ ಎಡಿಟರ್ ಆ್ಯಪ್, ಫೋಟೋ ಆರ್ಟ್ ಎಫೆಕ್ಟ್, ಹಾರಿಝಾನ್ ಬ್ಯೂಟಿ ಕ್ಯಾಮಾರ, ಕಾರ್ಟೂನ್ ಫೋಟೋ ಫಿಲ್ಟರ್ , ಕಾರ್ಟೂನ್ ಎಫೆಕ್ಟ್, ಕಾರ್ಟೂನ್ ಆರ್ಟ್ ಫೋಟೋಸ್, ಕಾರ್ಟೂನ್ ಆರ್ಟ್ ಫೋಟೋ, ಫೋಟೋ ಫಿಲ್ಟರ್, ಅವ್ ಸಮ್ ಕಾರ್ಟೂನ್ ಆರ್ಟ್ , ಆರ್ಟ್ ಫ್ಲಿಫ್ ಫೋಟೋ ಎಡಿಟಿಂಗ್, ಇದರ ಜೊತೆಗೆ ಇತರೆ ಆ್ಯಪ್ ಗಳು ಸೇರಿವೆ.

ಇವೆಲ್ಲವೂ ಫೋಟೋ ಎಡಿಟಿಂಗ್ ಮತ್ತು ಸಂಬಂಧಿತ ಆ್ಯಪ್ ಗಳಾಗಿದ್ದು, ಬಳಕೆದಾರರ ಫೋಟೋಗಳನ್ನು ಕದಿಯುವ ಕೆಲಸ ಮಾಡುತ್ತದೆ.

Comments are closed.