ವಾಷಿಂಗ್ಟನ್/ಟೆಹ್ರಾನ್: ಇರಾನ್ ಮಿಲಿಟರಿ ಪಡೆಯ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿಯನ್ನು ಅಮೆರಿಕ ವೈಮಾನಿಕ ಪಡೆ ದಾಳಿ ನಡೆಸಿ ಹತ್ಯೆಗೈದಿರುವ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಇರಾನ್ ಮಂಗಳವಾರ ರಾತ್ರಿ ಇರಾಕ್ ನಲ್ಲಿರುವ ಅಮೆರಿಕ ಪಡೆಗಳ ಮೇಲೆ ಮಿಸೈಲ್ ದಾಳಿ ನಡೆಸಿದೆ. ಇದರಿಂದ ಮಧ್ಯ ಏಷ್ಯಾದಲ್ಲಿ ಯುದ್ಧ ಕಾರ್ಮೊಡ ಕವಿದಿದೆ ಎಂದು ವರದಿ ತಿಳಿಸಿದೆ.
ಮತ್ತೊಂದೆಡೆ ಯಾವುದೇ ಯುದ್ಧ ಆರಂಭವಾದರೂ ಅದನ್ನು ಮುಗಿಸಲು ನಾವು ಸಿದ್ಧರಾಗಿದ್ದೇವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪೆರ್ ತಿರುಗೇಟು ನೀಡಿದ್ದಾರೆ. ಅಲ್ಲದೇ ಇರಾಕ್ ನಲ್ಲಿ ಅಮೆರಿಕ ಪಡೆಗಳ ಮೇಲೆ ಮಿಸೈಲ್ಸ್ ದಾಳಿ ನಡೆಸಿರುವ ಇರಾನ್ ಕೂಡಾ ಇದು ಯುದ್ಧದ ಪ್ರಕ್ರಿಯೆ ಎಂದು ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ಒಂದು ವೇಳೆ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ನಡೆದರೆ ಮುಂದೇನಾಗಬಹುದು? ಇರಾನ್ ಸೇನಾ ಬಲ ಎಷ್ಟಿದೆ? ಅಮೆರಿಕದ ಸೇನಾ ಸಾಮರ್ಥ್ಯ ಎಷ್ಟು ಎಂಬ ಚಿತ್ರಣ ಇಲ್ಲಿದೆ…
ಇರಾನ್ ಸೇನಾ ಬಲಾಬಲ:
ಇರಾನ್ ಮಿಲಿಟರಿ ಬಜೆಟ್ 19.6 ಬಿಲಿಯನ್ ಡಾಲರ್. ಇರಾನ್ ಬಳಿ ಇರುವ ಯುದ್ಧ ಟ್ಯಾಂಕ್ ಗಳ ಸಂಖ್ಯೆ 2,531, ಶಸ್ತ್ರ ಸಜ್ಜಿತ ಯುದ್ಧ ವಾಹನಗಳ ಸಂಖ್ಯೆ 1,625, 4096 ಆರ್ಟಿಲ್ಲರಿ(ಫಿರಂಗಿ), 570 ಸ್ವಯಂ ಚಾಲಿತ ಗನ್ಸ್ ಗಳು, ರಾಕೆಟ್ ಫಿರಂಗಿಗಳ ಸಂಖ್ಯೆ 1,438, 850 ವಿಮಾನಗಳು, 130 ಯುದ್ಧ ವಿಮಾನಗಳು, 73 ಮಲ್ಟಿ ರೋಲ್ ವಿಮಾನಗಳು, 52 ಅಟ್ಯಾಕ್ ವಿಮಾನಗಳು, 324 ಹೆಲಿಕಾಪ್ಟರ್ ಗಳು, 406 ನೌಕಾ ಹಡಗು, 40 ಸಬ್ ಮರೈನ್ಸ್ ಗಳು ಇವೆ.
ಇರಾನ್ ಆರ್ಮಿ, ನೌಕಾ, ವಾಯು ಪಡೆಗಳ ಸೈನಿಕರ ಸಂಖ್ಯೆ 5,23, 000 ಹಾಗೂ ಮೀಸಲು ಸೈನಿಕರ ಸಂಖ್ಯೆ 3,50,000.
ಅಮೆರಿಕದ ಮಿಲಿಟರಿ ಬಲಾಬಲ:
ಮಿಲಿಟರಿ ಸಾಮರ್ಥ್ಯದಲ್ಲಿ ಜಾಗತಿಕವಾಗಿ ಅಮೆರಿಕ ಒಂದನೇ ಸ್ಥಾನದಲ್ಲಿದೆ. ಇರಾನ್ ಕ್ಕಿಂತ ಅಮೆರಿಕ ಮಿಲಿಟರಿ ಸಾಮರ್ಥ್ಯ ಹತ್ತು ಪಟ್ಟು ಬಲಿಷ್ಠವಾಗಿದೆ.
ಅಮೆರಿಕ ಸೇನಾಪಡೆಯಲ್ಲಿರುವ ಸೈನಿಕರ ಸಂಖ್ಯೆ 1,28,1900 ಮತ್ತು ಹೆಚ್ಚುವರಿಯಾಗಿ ಲಭ್ಯ ಇರುವ ಸೇನಾಬಲ 144,872,845. ವಿಶ್ವದ ದೊಡ್ಡಣ್ಣ ಅಮೆರಿಕದ ರಕ್ಷಣಾ ಬಜೆಟ್ ಗಾತ್ರ 716 ಬಿಲಿಯನ್ ಅಮೆರಿಕನ್ ಡಾಲರ್. ಅಮೆರಿಕ ಪಡೆಗಳಲ್ಲಿ ಟ್ರೈಡೆಂಟ್ ಡಿ 5 ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಯುದ್ಧೋಪಕರಣ ಹೊಂದಿದೆ.
ಅಮೆರಿಕದ ಬಳಿ ಇರುವ ಯುದ್ಧ ಕ್ಷಿಪಣಿಗಳ ಸಂಖ್ಯೆ 7,200, ಶಸ್ತ್ರ ಸಜ್ಜಿತ ಟ್ಯಾಂಕ್ ಗಳ ಸಂಖ್ಯೆ 6393, ಶಸ್ತ್ರಸಜ್ಜಿತ ಯುದ್ಧ ವಾಹನಗಳ ಸಂಖ್ಯೆ 41,760, 3,269 ಯುದ್ಧ ಫಿರಂಗಿ(ಆರ್ಟಿಲ್ಲರಿ), 950 ಸ್ವಯಂಚಾಲಿತ್ ಗನ್ಸ್, 1197 ರಾಕೆಟ್ ಫಿರಂಗಿ, 12,304 ವಿಮಾನಗಳು(ವಾಯುಸೇನೆ), 457 ಯುದ್ಧ ವಿಮಾನಗಳು, 2192 ಮಲ್ಟಿ ರೋಲ್ ವಿಮಾನಗಳು, 587 ಅಟ್ಯಾಕ್ ವಿಮಾನಗಳು, 4889 ಹೆಲಿಕಾಪ್ಟರ್ ಗಳು, 437 ನೌಕಾ ಹಡಗುಗಳು, ವಾಯುಸೇನೆ ಯುದ್ಧ ವಿಮಾನಗಳ ಸಂಖ್ಯೆ 20, 71 ಸಬ್ ಮರೈನ್ ಗಳು ಇವೆ.
ಬಂಕರ್ ನಾಶಕ ಡೆಸ್ಟ್ರಾಯರ್ಸ್ಸ್, ವಿರೋಧಿ ಪಡೆಗಳಿಂದ ರಕ್ಷಣೆ ಪಡೆಯುವ ಯುದ್ಧ ವಾಹನ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ. 1945ರಿಂದ ಅಮೆರಿಕ ಈವರೆಗೆ 1054 ಆಟೋಮಿಕ್ ಬಾಂಬ್ ಗಳ ಪರೀಕ್ಷೆ ನಡೆಸಿದೆ.
Comments are closed.