ಅಂತರಾಷ್ಟ್ರೀಯ

ಅಸಮಾಧಾನ; ಅರಮನೆ ತೊರೆಯಲು ನಿರ್ಧರಿಸಿದ ಲಂಡನ್​ ಯುವರಾಜ!

Pinterest LinkedIn Tumblr


ಲಂಡನ್ (ಜನವರಿ 09) : ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ರಾಜಮನೆತನದ ಹಿರಿಯ ಸದಸ್ಯ ಸ್ಥಾನದಿಂದ ಹಿಂದೆ ಸರಿಯುತ್ತಿದ್ದು, ಉತ್ತರ ಅಮೆರಿಕಾದಲ್ಲಿ ಹೆಚ್ಚು ಸಮಯ ಕಳೆಯಲಿರುವುದಾಗಿ ದಂಪತಿಗಳು ಬುಧವಾರ ಐತಿಹಾಸಿಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ರಾಜ ದಂಪತಿಗಳು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ,”ನಾವು ರಾಜಮನೆತನದ ‘ಹಿರಿಯ’ ಸದಸ್ಯ ಸ್ಥಾನದಿಂದ ಹಿಂದೆ ಸರಿಯಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ನಿರ್ಧರಿಸಿದ್ದು, ಈ ಸಲುವಾಗಿ ಕೆಲಸ ಮಾಡಲು ಉದ್ದೇಶಿಸಿದ್ದೇವೆ. ಆದರೂ, ಬ್ರಿಟನ್ ರಾಣಿಯನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ ಹಾಗೂ ಬೆಂಬಲಿಸುತ್ತೇವೆ” ಎಂದು ಬಂಕಿಂಗ್​ಹ್ಯಾಮ್ ಅರಮನೆಯಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಹಲವು ತಿಂಗಳ ಅಂತರಿಕೆ ಚರ್ಚೆಯ ನಂತರ ಇಂತಹ ನಿರ್ಧಾರಕ್ಕೆ ಬರಲಾಗಿದೆ. ಈ ಸಂಸ್ಥೆಯೊಳಗೆ ಪ್ರಗತಿಪರ ಹೊಸ ಪಾತ್ರವನ್ನು ಪ್ರಾರಂಭಿಸುವ ಸಲುವಾಗಿ ನಾವು ಈ ವರ್ಷ ಪರಿವರ್ತನೆಯ ದಾರಿ ಹಿಡಿದಿದ್ದೇವೆ. ಅಲ್ಲದೆ, ಉತ್ತರ ಅಮೆರಿಕದಲ್ಲಿ ನಮ್ಮ ಹೆಚ್ಚು ಸಮಯವನ್ನು ಕಳೆಯಲು ನಿರ್ಧರಿಸಿದ್ದೇವೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಕೆಲ ವರ್ಷಗಳಿಂದ ಲಂಡನ್ ರಾಜ ಮನೆತನದಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನ ಹೀಗೆ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಇದೀಗ ಯುವರಾಜ ಹ್ಯಾರಿ ಹಾಗೂ ಪತ್ನಿ ಮೇಘನ್ ಅರಮನೆ ತೊರೆಯಲು ನಿರ್ಧರಿಸಿರುವ ನಡೆ ಆಘಾತಕ್ಕೆ ಕಾರಣವಾಗಿದೆ ಎಂದು ಬಂಕಿಂಗ್​ಹ್ಯಾಮ್ ಅರಮನೆ ಮೂಲಗಳು ತಿಳಿಸಿವೆ.

ಈ ಕುರಿತು ಸ್ಪಷ್ಟನೆ ನೀಡಿರುವ ರಾಣಿ ಎರಡನೇ ಎಲಿಜಬೆತ್ ವಕ್ತಾರ, “ವಿಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವರ ಭಯಕೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ, ಇದು ಸಂಕೀರ್ಣವಾದ ಸಮಸ್ಯೆಯಾಗಿದ್ದು, ಇದನ್ನು ಸರಿಪಡಿಸಲು ಸಮಯಾವಕಾಶದ ಅಗತ್ಯ ಇದೆ” ಎಂದಿದ್ದಾರೆ.

Comments are closed.