ರೋಮ್: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಟಲಿಯನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ. ಹೀಗಿರುವಾಗ ಜೋಡಿ ನಿಯಮ ಉಲ್ಲಂಘಿಸಿ ಕಾರಿನಲ್ಲಿಯೇ ಸೆಕ್ಸ್ ಮಾಡಿ ಅರೆಸ್ಟ್ ಆಗಿದ್ದಾರೆ.
ಸೋಮವಾರ ಇಟಲಿಯ ಮಿಲನ್‍ನ ಹೊರವಲಯದಲ್ಲಿರುವ ಮೆಕೆನೇಟ್‍ನಲ್ಲಿ 23 ವರ್ಷದ ಯುವಕ 40 ವರ್ಷದ ಮಹಿಳೆ ಜೊತೆ ಕಾರಿನಲ್ಲಿಯೇ ದೈಹಿಕ ಸಂಬಂಧ ಬೆಳೆಸುತ್ತಿದ್ದನು. ಇದನ್ನು ನೋಡಿದ ಪೊಲೀಸರು ಯುವಕ ಹಾಗೂ ಮಹಿಳೆಯನ್ನು ಬಂಧಿಸಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದಕ್ಕೆ ಇಟಲಿಯಲ್ಲಿ ಒಂದೇ ಕಾರಿನಲ್ಲಿ ಅದು ಪಕ್ಕಪಕ್ಕ ಸೀಟಿನಲ್ಲಿ ಕುಳಿತು ಪ್ರಯಾಣಿಸಬಾರದು ಎಂದು ನಿಯಮ ಜಾರಿ ಮಾಡಿದೆ. ವರದಿಯ ಪ್ರಕಾರ, ಜೋಡಿ ಈ ನಿಯಮವನ್ನು ಉಲ್ಲಂಘಿಸಿ ದೈಹಿಕ ಸಂಪರ್ಕ ಬೆಳೆಸಿದೆ ಎಂದು ಹೇಳಲಾಗಿದೆ.
ಇಟಲಿ ಸರ್ಕಾರ ಜನರಿಗೆ ಕೇವಲ ಊಟ ಹಾಗೂ ಔಷಧಿಗಳನ್ನು ಖರೀದಿಸಲು ಹಾಗೂ ಅದನ್ನು ಕೊಡಲು ಮಾತ್ರ ಮನೆಯಿಂದ ಹೊರ ಬರಲು ಅನುಮತಿ ನೀಡಿದೆ. ಅಲ್ಲದೆ ತುಂಬಾ ಅವಶ್ಯಕತೆ ಇದ್ದರೆ ಮಾತ್ರ ಕೆಲಸಕ್ಕೆ ಪ್ರಯಾಣ ಬೆಳೆಸಬೇಕು ಎಂದು ಆದೇಶ ನೀಡಲಾಗಿದೆ.
ಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 35,713 ಮಂದಿ ತುತ್ತಾಗಿದ್ದು, ಅವರಲ್ಲಿ 4,025 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 28,710 ಮಂದಿ ಕೊರೊನಾದಿಂದ ಬಳಲುತ್ತಿದ್ದು, 2,978 ಮಂದಿ ಮೃತಪಟ್ಟಿದ್ದಾರೆ.
Comments are closed.