ಕೊರೋನಾ ಮಹಾಮಾರಿ ಇಟಲಿಯಲ್ಲಿ ಮರಣ ಮೃದಂಗ ಬಾರಿಸುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ನಿನ್ನೆ (ಶನಿವಾರ) ಒಂದೇ ದಿನ 793 ಮಂದಿ ಕೊರೋನಾಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4825ಕ್ಕೆ ಏರಿಕೆಯಾಗಿದೆ. ಈ ಸಾಂಕ್ರಾಮಿಕ ರೋಗ ಹರಡಲು ಶುರುವಾದಾಗಿನಿಂದ ಅತಿದೊಡ್ಡ ಪ್ರಮಾಣದಲ್ಲಿ ಸಾವನ್ನಪ್ಪಿರುವುದು ನಿನ್ನೆ.
ಕಳೆದ ಗುರುವಾರ ಇಟಲಿ ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿತ್ತು. ಅಲ್ಲಿ ಅತೀ ಹೆಚ್ಚು ಸಾವು ಸಂಭವಿಸಿವೆ.
ಇಟಲಿಯಲ್ಲಿ ಈವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 53,578 ಮಂದಿ. ಈ ಹಿಂದೆ 47,021 ಮಂದಿ ಮೃತಪಟ್ಟಿದ್ದರು. ಈಗ ಸಾವಿನ ಸಂಖ್ಯೆ ಶೇ.13.9ರಷ್ಟು ಏರಿಕೆಯಾಗಿದೆ ಎಂದು ನಾಗರಿಕ ಸುರಕ್ಷತಾ ಏಜೆನ್ಸಿ ತಿಳಿಸಿದೆ.
ಇಟಲಿಯ ಲೋಂಬಾರ್ಡಿ ಪ್ರಾಂತ್ಯದಲ್ಲಿ ಕೊರೋನಾ ವೈರಸ್ಗೆ ಅತಿ ಹೆಚ್ಚಿನ ಜನರು ಬಲಿಯಾಗಿದ್ದಾರೆ. ಅಲ್ಲಿ ತುಂಬಾ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಪ್ರಾಂತ್ಯದಲ್ಲಿ ಈವರೆಗೆ ಒಟ್ಟು 3,095 ಜನರು ಸಾವನ್ನಪ್ಪಿದ್ದರೆ, 25,515 ಪ್ರಕರಣಗಳು ಪತ್ತೆಯಾಗಿವೆ.
ಈ ಮಾರಣಾಂತಿಕ ಕೊರೋನಾ ವೈರಸ್ ವಿಶ್ವಾದ್ಯಂತ ಕ್ಷಿಪ್ರ ವೇಗದಲ್ಲಿ ಹರಡುತ್ತಿದೆ. ಈ ಸೋಂಕಿಗೆ ಒಳಗಾದವರಲ್ಲಿ 6,072 ಮಂದಿ ಚೇತರಿಸಿಕೊಂಡಿದ್ದಾರೆ.
Comments are closed.