ಅಂತರಾಷ್ಟ್ರೀಯ

ಅಮೆರಿಕಾದಲ್ಲಿ ಕೊರೋನಾಗೆ ಒಂದೇ ದಿನ 2,600 ಮಂದಿ ಸಾವು: 27,176ಕ್ಕೆ ಏರಿದ ಸಾವಿನ ಸಂಖ್ಯೆ

Pinterest LinkedIn Tumblr


ವಾಷಿಂಗ್ಟನ್: ಕೊರೋನಾ ವೈರಸ್ ಅಮೆರಿಕಾದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, 24 ಗಂಟೆಗಳಲ್ಲಿ ಬರೋಬ್ಬರಿ 2,600 ಮಂದಿ ಸಾವಿಗೀಡಾಗಿದ್ದಾರೆ.

ಈ ವರೆಗೆ ಒಂದೇ ದಿನ ಅತೀಹೆಚ್ಚು ಸಾವಿನ ಪ್ರಮಾಣ ಇದಾಗಿದ್ದು, ಒಟ್ಟಾರೆಯಾಗಿ ಅಮೆರಿಕಾದಲ್ಲಿ 6,19,331 ಮಂದಿಗೆ ಸೋಂಕು ದೃಢಪಟ್ಟಿದ್ದು, 27,176 ಮಂದಿ ಸಾವನ್ನಪ್ಪಿದ್ದಾರೆ.

ಈ ನಡುವೆ ಕೊರೋನಾ ಮಹಾಮಾರಿಗೆ ನಿನ್ನೆ ಇಟಲಿಯಲ್ಲಿ 578 ಮಂದಿ ಅಸು ನೀಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 21,645 ಏರಿದ್ದು, ಒಟ್ಟು 1,65,155 ಮಂದಿ ಸೋಂಕಿತರಿದ್ದಾರೆ. ಹೊಸದಾಗಿ 3,573 ಮಂದಿಗೆ ವ್ಯಾಧಿ ಅಂಟಿದೆ.

ಕೊರೋನಾ ಬ್ರಿಟನ್ ನಲ್ಲಿಯೂ ಸಾಕಷ್ಟು ಮಂದಿಯನ್ನು ಬಲಿಪಡೆದುಕೊಂಡಿದ್ದು, ಬುಧವಾರ ಒಂದೇ ದಿನ 761 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿಗೆ ಸತ್ತವರ ಸಂಖ್ಯೆ 12,868ಕ್ಕೆ ಮುಟ್ಟಿದೆ. 4,603 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡಿದ್ದು, ಒಟ್ಟು 98,476 ಮಂದಿಗೆ ಸೋಂಕು ದೃಢವಾಗಿದೆ.

Comments are closed.