ಅಂತರಾಷ್ಟ್ರೀಯ

ಈ ಎರಡು ದೇಶಗಳು ತನ್ನ ಜನರನ್ನ ಕರೋನಾ ಸೋಂಕಿಗೆ ದೂಡುತ್ತಿವೆ

Pinterest LinkedIn Tumblr


ಕರೋನ ವೈರಸ್‌ನಿಂದ ಇಡೀ ಜಗತ್ತು ಬೆಚ್ಚಿಬಿದ್ದಿದೆ, ಆದರೆ ಈ ಮಾರಕ ವೈರಸ್‌ನ ಭಯವೇ ಇಲ್ಲದೆ ಸಣ್ಣನೆಯ ಎಳೆ ಬಿಸಿಲಿರುವ ದಿನವನ್ನ ಆನಂದಿಸಲು ಲಕ್ಷಾಂತರ ಜನರು ತಮ್ಮ ಕುಟುಂಬಗಳೊಂದಿಗೆ ಉದ್ಯಾನವನಗಳಲ್ಲಿ ಸೇರುತ್ತಿರುವ ದೇಶವೂ ಒಂದಿದೆ ನೋಡಿ. ವಿಶ್ವಾದ್ಯಂತ ಲಕ್ಷಾಂತರ ಜನರು ಮಾರಣಾಂತಿಕ ಕರೋನ ವೈರಸ್ ನಿಂದ ಪ್ರಬವಾವಿತರಾಗಿದ್ದಾರೆ. ಇದುವರೆಗೆ 1 ಲಕ್ಷ 20 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಭಯಭೀತರಾದ ಆಯಾ ದೇಶದ ಸರ್ಕಾರಗಳು ಸಾರ್ವಜನಿಕ ಸ್ಥಳಗಳಲ್ಲಿ ಐದಕ್ಕೂ ಹೆಚ್ಚು ಜನರನ್ನು ಒಟ್ಟುಗೂಡುವುದನ್ನು ನಿಷೇಧಿಸಿವೆ. ಮುಂದಿನ ಎರಡು-ಮೂರು ವಾರಗಳವರೆಗೆ ಅನೇಕ ದೇಶಗಳು ಕೋಟ್ಯಂತರ ಜನರನ್ನು ಮನೆಯಲ್ಲೇ ಇರುವಂತೆ ಸೂಚಿಸಿವೆ. ಹಾಗಾದರೆ ಹಾಲೆಂಡ್‌ ನಂತಹ ದೇಶದಲ್ಲಿ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಸಾವಿರಾರು, ಲಕ್ಷಾಂತರ ಜನ ಸೇರಲು ಬಿಡುತ್ತಿರೋದಾದರೂ ಯಾಕೆ?

ಜನರಲ್ಲಿ ಸಾಮೂಹಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಕ್ರಮ

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕರೋನಾ ವೈರಸ್ ಪ್ರಭಾವ ದೀರ್ಘಕಾಲದವರೆಗೆ ಉಳಿಯುತ್ತದೆ ಎಂದು ಹಾಲೆಂಡ್ ಪ್ರಧಾನಿ ಮಾರ್ಕ್ ರುಟ್ಟೆ ನಂಬಿದ್ದಾರೆ. ಆದ್ದರಿಂದ ಡಚ್ ಸಾರ್ವಜನಿಕರನ್ನು ಅಂದರೆ ಹಾಲೆಂಡ್‌ನ ಜನರನ್ನು ವೈರಸ್‌ಗೆ ಮುಂದೆ ಬಿಟ್ಟುಬಿಡಬೇಕು. ಹೀಗೆ ಮಾಡುವುದರಿಂದ, ಸಾರ್ವಜನಿಕರಲ್ಲಿ ವೈರಸ್ ವಿರುದ್ಧ ಹೋರಾಡಲು ಆತ್ಮಸ್ಥೈರ್ಯ ಹಾಗು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ದೇಶದ ಪರಿಸ್ಥಿತಿ ಆದಷ್ಟು ಬೇಗ ಸಾಮಾನ್ಯವಾಗುತ್ತದೆಯಂತೆ. ಬಹುಶಃ ಈ ಮಾನ್ಯತೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ವೈದ್ಯಕೀಯ ವೃತ್ತಿಪರರಿಂದ (Medical Proffesionals) ಪಡೆದ ಮಾಹಿತಿಯನ್ನು ಆಧರಿಸಿರಬಹುದು ಎಂದು ಹೇಳಲಾಗುತ್ತಿದೆ.

ಹಾಲೆಂಡ್ ನಲ್ಲಿ ಶಾಲಾ ಕಾಲೇಜು, ಸಿನೆಮಾ,‌ ಮಾಲ್ ಎಲ್ಲವೂ ತೆರೆದಿವೆ

ಹಾಲೆಂಡ್‌ನ ಪ್ರಧಾನ ಮಂತ್ರಿಯ ಈ ಮಾನ್ಯತೆಯಿಂದಾಗಿ, ಅಲ್ಲಿನ ಸರ್ಕಾರವು ಶಾಲೆಗಳು, ಕೆಫೆಗಳು, ಸಿನೆಮಾ ಹಾಲ್‌ಗಳು, ಧಾರ್ಮಿಕ ಸ್ಥಳಗಳು ಮತ್ತು ಕಚೇರಿಗಳನ್ನು ಕರೋನ ವೈರಸ್ ಭೀತಿಯ ನಡುವೆಯೂ ಮುಚ್ಚಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತಿದೆ. ಅಲ್ಲಿನ ಜನರು ಎಲ್ಲಿ ಬೇಕಾದರೂ ಪ್ರಯಾಣಿಸಲು ಮುಕ್ತರಾಗಿದ್ದಾರೆ. ಜನರು ಮಾಲ್‌ಗೆ ಹೋಗಿ ಇ-ಕಾಮರ್ಸ್ ಕಂಪನಿಗಳಿಂದ ಸರಕುಗಳ ಪ್ಯಾಕೆಟ್‌ಗಳನ್ನು ಸ್ವೀಕರಿಸುವ ಮೂಲಕ ಪ್ಯಾಕೆಟ್ ಗಳನ್ನ ಖರೀದಿಸುತ್ತಿದ್ದಾರೆ.

ಅನಿವಾರ್ಯವಾಗಿ ಲಾಕ್‌ಡೌನ್ ಮಾಡಿದ ಬ್ರಿಟನ್

ಸ್ವೀಡನ್ ತನ್ನ ನಾಗರಿಕರಿಗೆ ಹಾಲೆಂಡ್ ಸರ್ಕಾರದಂತೆ ತನ್ನ ದೇಶದಲ್ಲೂ ಲಾಕ್‌ಡೌನ್ ಮಾಡಿಲ್ಲ. ಕರೋನವೈರಸ್ ವಿ’ರುದ್ಧ ಬ್ರಿಟನ್ ಸರ್ಕಾರ ಈ ಹಿಂದೆ ಇದೇ ನೀತಿಯನ್ನು ಅನುಸರಿಸಿತ್ತು. ಸಾರ್ವಜನಿಕರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು ಇದಕ್ಕೆ ಲಾಕ್‌ಡೌನ್ ಮಾಡುವ ಅವಶ್ಯಕತೆಯಿಲ್ಲ ಎಂದು ಬ್ರಿಟನ್ ಪ್ರಧಾನಿ ನಂಬಿದ್ದರು. ಆದರೆ ಬ್ರಿಟನ್‌ನಲ್ಲಿ ಕರೋನ ವೈರಸ್‌ಗಳು ಭೀಕರ ಸ್ವರೂಪವನ್ನು ಪಡೆದುಕೊಂಡ ಬಳಿಕ ಬ್ರಿಟನ್ ಪ್ರಧಾನಿ ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಗಾಗಿ ಅನಿವಾರ್ಯವಾಗಿ ಆದೇಶಿಸಬೇಕಾಯಿತು.

ಕರೋನಾ ವೈರಸ್‌ನ್ನ ಸೋಲಿಸುವ ಕಾರ್ಯತಂತ್ರ

ಜಗತ್ತಿನಲ್ಲಿ ಈಗ ಸ್ವೀಡನ್ ಮತ್ತು ಹಾಲೆಂಡ್‌ ದೇಶಗಳು ಮಾತ್ರ ರೋಗನಿರೋಧಕ ಶಕ್ತಿಯ ಮೂಲಕ ಕರೋನವೈರಸ್ ಅನ್ನು ಸೋಲಿಸುವ ಪ್ರಯತ್ನಗಳು ಮಾಡುತ್ತಿವೆ. ಕೆಲವು ದೇಶಗಳು ಈ ಎರಡು ದೇಶಗಳ ಕಾರ್ಯತಂತ್ರವನ್ನು ಟೀಕಿಸಿವೆ, ಆದರೆ ಈ ದೇಶಗಳು ಲಾಕ್‌ಡೌನ್‌ ಮಾಡಿದರೂ ವೈರಸ್ ಕೊನೆಗೊಳ್ಳುವುದಿಲ್ಲ. ಇದು ಭವಿಷ್ಯದಲ್ಲಿ ಮತ್ತೆ ಹರಡಬಹುದು, ಹೆಚ್ಚಿನ ಸಂಖ್ಯೆಯ ಜನರ ಸಾವಿಗೆ ಕಾರಣವಾಗಬಹುದು, ದೇಶದ ಸಂಸ್ಥೆಗಳ ಭಾರಿ ನಾಶಕ್ಕೆ ಕಾರಣವಾಗಬಹುದು. ದೇಶದ ಜನರ ರೋಗನಿರೋಧಕ ಶಕ್ತಿಯು ಈ ವೈರಸ್‌ನೊಂದಿಗೆ ಹೋರಾಡಲು ಸಾಧ್ಯವಾದರೆ, ಈ ವೈರಸ್ ಎಂದಿಗೂ ಮನುಷ್ಯ ಕುಲಕ್ಕೆ ಅಪಾಯವಾಗಲಾರದು ಎಂಬುದು ಸ್ವೀಡನ್ ಹಾಗು ಹಾಲೆಂಡ್ ದೇಶಗಳು ನಂಬಿವೆ.

Comments are closed.