ಅಂತರಾಷ್ಟ್ರೀಯ

ಕೊರೋನಾ ವಿರುದ್ಧ ಪ್ರತಿಕಾಯ (ಅಂಟಿಬಾಡಿ )ಅಭಿವೃದ್ಧಿಯಲ್ಲಿ ಪ್ರಗತಿ-ಇಸ್ರೇಲ್

Pinterest LinkedIn Tumblr


ಜೆರುಸೆಲೆಂ: ಕೊರೋನಾವೈರಸ್ ವಿರುದ್ಧ ಪ್ರತಿಕಾಯಗಳನ್ನು (ಅಂಟಿಬಾಡಿ) ಅಭಿವೃದ್ಧಿಪಡಿಸುವಲ್ಲಿ ದೇಶದ
ಮುಖ್ಯ ಜೈವಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಮಹತ್ವದ ಪ್ರಗತಿ ಸಾಧಿಸಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಹೇಳಿದ್ದಾರೆ.

ಇಸ್ರೇಲ್ ನ ಜೈವಿಕ ಸಂಶೋಧನಾ ಸಂಸ್ಥೆಯ ಲ್ಯಾಬ್ ಗಳಿಗೆ ಸೋಮವಾರ ಬೆನೆಟ್ ಭೇಟಿ ನೀಡಿದ್ದು, ಕೊರೋನಾವೈರಸ್ ವಿರುದ್ಧದ ಪ್ರತಿಕಾಯಗಳನ್ನು ತೋರಿಸಲಾಗಿದೆ. ಅವುಗಳು ಅನಾರೋಗ್ಯಕ್ಕೊಳಗಾದ ವ್ಯಕ್ತಿಯ ದೇಹಗಳಲ್ಲಿ ಕೊರೋನಾವೈರಸ್ ವಿರುದ್ಧ ಹೋರಾಡಿ ತಟಸ್ಥಗೊಳಿಸಲಿವೆ ಎಂದು ಬೆನೆಟ್ ಕಾರ್ಯಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಂಟಿಬಾಡಿ ಅಭಿವೃದ್ಧಿಕಾರ್ಯ ಮುಕ್ತಾಯಗೊಂಡಿದ್ದು, ಪೇಟೆಂಟ್ ಪಡೆಯುವ ಪ್ರಕ್ರಿಯೆಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಮುಂದಿನ ಹಂತದಲ್ಲಿ ಅಂಟಿಬಾಡಿ ಉತ್ಪಾದನೆಗೆ ಅಂತಾರಾಷ್ಟ್ರೀಯ ಕಂಪನಿಗಳನ್ನು ಕೋರಲಾಗುವುದು ಎಂದು ಹೇಳಿಕೆಯಲ್ಲಿ ಹೇಳಿದ್ದಾರೆ.

ಅಂಟಿಬಾಡಿ ಅಭಿವೃದ್ಧಿಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಸಂಸ್ಥೆಯ ಸಿಬ್ಬಂದಿ ಬಗ್ಗೆ ಹೆಮ್ಮೆಯಾಗುತ್ತಿದೆ. ಅವರ ಕ್ರಿಯಾಶೀಲತೆ ಮತ್ತು ಬುದ್ದಿವಂತಿಕೆಯಿಂದ ಅದ್ಬುತವಾದ ಸಾಧನೆ ಮಾಡಲಾಗಿದೆ ಎಂದು ಬೆನೆಟ್ ತಿಳಿಸಿದ್ದಾರೆ.

1952ರಲ್ಲಿ ಸ್ಥಾಪನೆಯಾಗಿರುವ ಐಐಬಿಆರ್ ಸಂಸ್ಥೆ ತಾಂತ್ರಿಕವಾಗಿ ಪ್ರಧಾನಮಂತ್ರಿ ಕಾರ್ಯಾಲಯದ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಆದರೆ, ರಕ್ಷಣಾ ಸಚಿವಾಲಯದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಕೋವಿಡ್-19 ವಿರುದ್ಧದ ಲಸಿಕೆ ಅಭಿವೃದ್ಧಿಸುವಲ್ಲಿ ಸಂಸ್ಥೆಗೆ ಅಗತ್ಯ ಸಂಪನ್ಮೂಲ ಒದಗಿಸಲು ಫೆಬ್ರವರಿ 1ರಂದು ಪ್ರಧಾನ ಮಂತ್ರಿ ಬೆಂಜಮಿನ್ ನೆತಾನ್ಯಹು ಆದೇಶ ನೀಡಿದ್ದರು.

Comments are closed.