ಬೀಜಿಂಗ್: ಒಗ್ಗಟ್ಟಿನಿಂದ ಕೋವಿಡ್ (COVID-19) ಅನ್ನು ವಿರುದ್ಧ ಹೋರಾಡುವಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಮಹಾನಿರ್ದೇಶಕ ಟ್ರೆಡೋಸ್ ಅಧಾನೊಮ್ ಘೆಬ್ರೇಯಾಸ್ ಇಡೀ ಜಗತ್ತಿಗೆ ಕರೆ ನೀಡಿದ್ದಾರೆ. ಏಕತೆಯೇ ಕರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಇರುವ ‘ರಾಮಬಾಣ’ ಎಂದು ಅವರು ಒತ್ತಿ ಹೇಳಿದರು.
COVID-19 ಇಡೀ ಜಗತ್ತಿಗೆ ಒಂದು ಎಚ್ಚರಿಕೆ ಎಂದು ತಿಳಿಸಿರುವ ಟ್ರಾಡೋಸ್ ಇದು ಭವಿಷ್ಯವನ್ನು ಸೃಷ್ಟಿಸಲು ಜಗತ್ತಿಗೆ ಉತ್ತಮ ಅವಕಾಶವೂ ಹೌದು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಯುರೋಪಿಯನ್ ಕಮಿಷನ್ ಆಯೋಜಿಸಿದ್ದ ಕರೋನಾ ವೈರಸ್ (Coronavirus) COVID-19 ಜಾಗತಿಕ ಪ್ರತಿಕ್ರಿಯೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ 7.4 ಶತಕೋಟಿ ಯುರೋಗಳಷ್ಟು ಹಣವನ್ನು ಸಂಗ್ರಹಿಸಿದ್ದನ್ನು ಟ್ರೆಡೋಸ್ ಅಧೋಮ್ ಘೆಬ್ರೀಯಸ್ ಶ್ಲಾಘಿಸಿದರು.
ಪ್ರತಿಯೊಬ್ಬ ವ್ಯಕ್ತಿಯ, ಜೀವಿಯ ಪ್ರಾಣ ಅಮೂಲ್ಯವಾದುದು. ಹಾಗಾಗಿ ಪ್ರತಿಯೊಬ್ಬರನ್ನೂ ರಕ್ಷಿಸಬೇಕು. COVID-19 ಅನ್ನು ಸೋಲಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕೆಂದು. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಿ ಎಂದು ಅವರು ಜಗತ್ತಿಗೆ ಮನವಿ ಮಾಡಿದರು.
Comments are closed.