ವಾಷಿಂಗ್ಟನ್: ಕೊರೋನಾ ವಿರುದ್ಧ ಹೋರಾಡಲು ಭಾರತಕ್ಕೆ ಹಲವು ವೆಂಟಿಲೇಟರ್ ಗಳನ್ನು ಕಳುಹಿಸಿಕೊಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತಕ್ಕೆ ಹಲವು ವೆಂಟಿಲೇಟರ್ ಗಳನ್ನು ಕಳುಹಿಸಿಕೊಡುತ್ತೇವೆ. ನಾನು ಈ ಬಗ್ಗೆ ಪ್ರಧಾನಿ ಮೋದಿಯವರ ಜೊತೆ ಮಾತನಾಡಿದ್ದೇನೆ. ನಮ್ಮಲ್ಲಿಂದ ಸಾಕಷ್ಟು ವೆಂಟಿಲೇಟರ್ ಗಳನ್ನು ಕಳುಹಿಸಿಕೊಡಬಹುದು ಎಂದು ಟ್ರಂಪ್ ನಿನ್ನೆ ಶ್ವೇತಭವನದಲ್ಲಿ ತಿಳಿಸಿದರು.
ಕಣ್ಣಿಗೆ ಕಾಣದಿರುವ ಆರೋಗ್ಯ ಶತ್ರು ಎನಿಸಿಕೊಂಡಿರುವ ಕೊರೋನಾ ಸೋಂಕು ವಿರುದ್ಧ ಹೋರಾಡಲು ಅಮೆರಿಕ ಮತ್ತು ಭಾರತ ಒಂದಾಗಲಿದ್ದು ಲಸಿಕೆ ಅಭಿವೃದ್ಧಿಪಡಿಸಲು ಎರಡೂ ದೇಶಗಳು ಪರಸ್ಪರ ಸಹಕಾರ ನೀಡಲಿವೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವು ಭಾರತದ ಜೊತೆಗಿದ್ದೇವೆ. ಲಸಿಕೆ ಅಭಿವೃದ್ಧಿಯಲ್ಲಿ ಕೂಡ ಸಹಕಾರ ನೀಡಲಿದ್ದೇವೆ. ಒಟ್ಟಾಗಿ ನಾವು ಕೊರೋನಾ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದರು.
Comments are closed.