ಲಂಡನ್: ಕೊರೊನಾ ವೈರಸ್ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಇದರಿಂದಾಗಿ ವೈದ್ಯಕೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಬ್ರಿಟನ್‌ನಲ್ಲಿ ಸಂಶೋಧನೆಯ ಭಾಗವಾಗಿ ಕೊರೊನಾ ವೈರಸ್ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಮಾನವರಲ್ಲಿ ಸೋಂಕು ಅನ್ನು ಪತ್ತೆ ಹಚ್ಚಲು ಸಾಧ್ಯವಾಗುವಂತಹ ವಿಶೇಷ ತರಬೇತಿ ಪಡೆದ ಕೋವಿಡ್ ಡಾಗ್ಸ್ ನ ಪ್ರಯೋಗವನ್ನು ಪ್ರಾರಂಭಿಸಲಾಗಿದೆ.
ಮುಂದಿನ ದಿನಗಳಲ್ಲಿ ಕೊರೊನಾ ವೈರಸ್ ಅನ್ನು ಪತ್ತೆಹಚ್ಚಲು ಹಾಗೂ ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಲು ಕೋವಿಡ್ ಡಾಗ್ಸ್ ನೆರವಾಗಲಿದೆ ಎಂಬ ನಂಬಿಕೆಯನ್ನು ಬ್ರಿಟನ್ ಹೊಂದಿದೆ.
ಮೊದಲ ಹಂತದ ಪ್ರಯೋಗಕ್ಕೆ ಬ್ರಿಟನ್ ಸರಕಾರ 5 ಲಕ್ಷ ಪೌಂಡ್‌ಗಳ ಧನಸಹಾಯವನ್ನು ನೀಡಲಿದೆ. ಲಂಡನ್ ಸ್ಕೂಲ್ ಆಫ್ ಹೈಜೀನ್ ಆ್ಯಂಡ್ ಟ್ರಾಪಿಕಲ್ ಮೆಡಿಸಿನ್ (ಎಲ್ಎಸ್‌ಎಚ್‌ಟಿಎಂ) ಸಂಶೋಧಕರು ಮೆಡಿಕಲ್ ಡಿಟೆಕ್ಷನ್ ಡಾಗ್ಸ್ ಮತ್ತು ಡರ್ಹಾಮ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಸಲಿದೆ.
ವಾಸನೆಯ ಮಾದರಿಗಳಿಂದ ಶ್ವಾನಗಳಿಂದ ಮಾನವರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆ ಹಚ್ಚಲು ಸಾಧ್ಯವಿದೆಯೇ ಎಂಬುದನ್ನು ನಿರ್ಧರಿಸುವುದು ಮೊದಲ ಹಂತದ ಪ್ರಯೋಗದ ಉದ್ದೇಶವಾಗಿದೆ.
ಕ್ಯಾನ್ಸರ್, ಮಲೇರೀಯಾ ಸೇರಿದಂತೆ ಮಾನವರಲ್ಲಿ ವಿವಿಧ ಕಾಯಿಲೆಗಳ ವಾಸನೆಯನ್ನು ಕಂಡುಹಿಡಿಯಲು ತರಬೇತಿ ಪಡೆದಿರುವ ಶ್ವಾನಗಳಿಗೆ ವಿಶೇಷ ತರಬೇತಿ ಮೂಲಕ ವಿಶ್ವ ವಿದ್ಯಾಲಯದ ಪ್ರಮುಖ ರೋಗ ನಿಯಂತ್ರಣ ತಜ್ಞರು ಪ್ರಯೋಗವನ್ನು ಮಾಡಲಿದ್ದಾರೆ.
ಬಯೋ ಡಿಟೆಕ್ಷನ್ ಶ್ವಾನಗಳು ಈಗಾಗಲೇ ನಿರ್ದಿಷ್ಟ ಕ್ಯಾನ್ಸರ್‌ಗಳನ್ನು ಪತ್ತೆ ಮಾಡಿದೆ. ಈಗ ಕೊರೊನಾ ಸೋಂಕಿನ ವಿಚಾರದಲ್ಲೂ ತ್ವರಿತ ಫಲಿತಾಂಶವನ್ನು ನಿರೀಕ್ಷೆ ಮಾಡುವುದಾಗಿ ಬ್ರಿಟನ್‌ನ ಸಚಿವ ಲಾರ್ಡ್ ಬೆತೆಲ್ ತಿಳಿಸಿದ್ದಾರೆ.
ಕೊರೊನಾ ಸೋಂಕಿನ ವಿಚಾರದಲ್ಲಿ ನಿಖರತೆಯು ಅತ್ಯಗತ್ಯವಾಗಿದ್ದರಿಂದ ಈ ಪ್ರಯೋಗವು ಕೋವಿಡ್ ಸೋಂಕನ್ನು ಪತ್ತೆ ಹಚ್ಚಲು ಶ್ವಾನಗಳಿಗೆ ಸಾಧ್ಯವೇ ಎಂಬುದು ತಿಳಿದು ಬರಲಿದೆ.
Comments are closed.