ಅಂತರಾಷ್ಟ್ರೀಯ

ಕೊರೊನಾ: ಹೈಡ್ರಾಕ್ಸಿಕ್ಲೋರೋಕ್ವಿನ್‌ ಟ್ರಯಲ್ಸ್‌ಗೆ ಮಾತ್ರ ಸೀಮಿತ ಎಂದ ವಿಶ್ವ ಆರೋಗ್ಯ ಸಂಸ್ಥೆ

Pinterest LinkedIn Tumblr


ಜಿನೆವಾ: ಮಲೇರಿಯಾ ರೋಗಿಗಳ ಚಿಕಿತ್ಸೆಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧವನ್ನು ಕೋವಿಡ್‌ – 19 ಸೋಂಕಿಗೆ ಪರಿಣಾಕಾರಿ ಎಂಬುದನ್ನು ವೈದ್ಯಕೀಯ ವಿಜ್ಞಾನ ಖಾತರಿಪಡಿಸಿಲ್ಲ. ನಿಯಂತ್ರಿತ ಕ್ಲಿನಿಕಲ್‌ ಟ್ರಯಲ್ಸ್‌ ಮಾದರಿಯಲ್ಲಿ ರೋಗಿಗಳ ಮೇಲೆ ಪ್ರಯೋಗಿಸಲು ಸಲಹೆ ನೀಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಬುಧವಾರ ಹೇಳಿದೆ.
ಈ ಮೂಲಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧವನ್ನು ಕೋವಿಡ್‌-19 ಸೋಂಕಿತರ ಚಿಕಿತ್ಸೆಗೆ ಬಳಸುತ್ತಿದ್ದೇವೆ ಎಂದು ಸೋಮವಾರ ನೀಡಿದ ಹೇಳಿಕೆಗೆ ತದ್ವಿರುದ್ಧ ಪ್ರಕಟಣೆ ಬಿಡುಗಡೆ ಮಾಡಿದೆ ವಿಶ್ವ ಆರೋಗ್ಯ ಸಂಸ್ಥೆ.

ಡಬ್ಲ್ಯುಎಚ್‌ಒ ಎಮರ್ಜೆನ್ಸಿ ವಿಭಾಗದ ಮಖ್ಯಸ್ಥ, ಮೈಕೆಲ್‌ ರಯಾನ್‌ ಬುಧವಾರ ಮಾತನಾಡಿ “ಮಲೇರಿಯಾ ಔಷಧ ಪೂರ್ಣ ಪ್ರಮಾಣದಲ್ಲಿ ಕೊರೊನಾ ವಿರುದ್ಧ ಚಿಕಿತ್ಸೆಗೆ ಬಳಸಲು ಹೇಳಿಲ್ಲ. ಅದನ್ನು ವೈದ್ಯಕೀಯ ಪ್ರಯೋಗದ ಮಾದರಿಯಲ್ಲಿ ರೋಗಿಗೆ ನೀಡಲು ಸೂಚಿಸಲಾಗಿದೆ. ಅಲ್ಲದೆ, ಆಯಾಯ ದೇಶಗಳ ವೈದ್ಯಕೀಯ ಮಂಡಳಿಗಳು ತಮ್ಮ ದೇಶದೊಳಗೆ ನಿಗದಿತ ಔಷಧಗಳನ್ನು ಬಳಸಲು ಸೂಚನೆ ನೀಡುವ ಸ್ವಾತಂತ್ರ್ಯ ಹೊಂದಿದೆ,” ಎಂದು ಹೇಳಿದರು.

ಚೀನಾದ ವುಹಾನ್‌ನಿಂದ ಕೊರೊನಾ ವೈರಸ್‌ ಹರಡಲು ಶುರುವಾದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಡಬ್ಲ್ಯುಎಚ್‌ಒ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದು, ಸೋಮವಾರ ಅಮೆರಿಕದ ಪಾಲಿನ ಅನುದಾನವನ್ನೇ ಸ್ಥಗಿತ ಮಾಡುವುದಾಗಿ ಬೆದರಿಕೆ ಹಾಕಿದ್ದರು.

Comments are closed.