ಬೀಜಿಂಗ್ (ಜೂ. 14) : ನೆರೆಯ ಚೀನಾದ ವುಹಾನ್ ನಗರದಲ್ಲಿ ಕೊರೋನಾ ವೈರಸ್ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಆದರೆ, ಎಲ್ಲ ರಾಷ್ಟ್ರಗಳಿಗಿಂತ ಮೊದಲು ಈ ಭಾಗದಲ್ಲಿ ಸೋಂಕು ನಿತಂತ್ರಣಕ್ಕೆ ಬಂದಿತ್ತು. ಈಗ ಕೊರೋನಾ ಪ್ರಕರಣ ಕಡಿಮೆ ಆಯಿತು ಎನ್ನುವಾಗಲೇ ಬೀಜಿಂಗ್ನಲ್ಲಿ ಮತ್ತೆ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ.
ಸುಮಾರು ಮೂರು ತಿಂಗಳ ಕಠಿಣ ಲಾಕ್ಡೌನ್ನಿಂದಾಗಿ ಚೀನಾದಲ್ಲಿ ಈ ವೈರಸ್ ನಿಯಂತ್ರಣಕ್ಕೆ ಬಂದಿತ್ತು. ಏಪ್ರಿಲ್ನಿಂದ ಇಲ್ಲಿಯವರೆಗೆ ಅಲ್ಲೊಂದು ಇಲ್ಲೊಂದು ಪ್ರಕರಣ ಮಾತ್ರ ದಾಖಲಾಗುತ್ತಿದ್ದವು. ಆದರೆ, ದಕ್ಷಿಣ ಬೀಜಿಂಗ್ನಲ್ಲಿ ಶನಿವಾರ ಒಂದೇ ದಿನ 57 ಕೇಸ್ಗಳು ಪತ್ತೆ ಆಗಿವೆ. ಚೀನಾದಲ್ಲಿ ಏಪ್ರಿಲ್ನಿಂದ ಇಲ್ಲಿವರೆಗೆ ಒಂದೇ ದಿನ ದಾಖಲಾದ ಅತಿ ಹೆಚ್ಚು ಪ್ರಕರಣ ಇದಾಗಿದೆ.
ಬೀಜಿಂಗ್ನಲ್ಲಿರುವ ತರಕಾರಿ ಹಾಗೂ ಮಾಂಸದ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಕೊರೋನಾ ಕಾಣಿಸಿಕೊಂಡಿದೆ. ಇವನಿಂದಾಗಿ 37 ಜನರಿಗೆ ವೈರಸ್ ಹರಡಿದೆ ಎನ್ನಲಾಗಿದೆ. ಉಳಿದ ಪ್ರಕರಣಗಳು ವಿದೇಶದಿಂದ ಬಂದವರಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಸದ್ಯ, ಮುಂಜಾಗೃತ ಕ್ರಮವಾಗಿ ಈ ಭಾಗದಲ್ಲಿರುವ ತರಕಾರಿ ಹಾಗೂ ಮಾಂಸದ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಈಗ ಒಂದೇ ದಿನ ಇಷ್ಟೊಂದು ಪ್ರಕರಣ ಕಾಣಿಸಿಕೊಂಡಿರುವುದು ಸದ್ಯದ ಆತಂಕವನ್ನು ಹೆಚ್ಚಿಸಿದೆ.
ಈ ಮೊದಲು ಕೊರೋನಾ ವೈರಸ್ ಚೀನಾದ ವುಹಾನ್ ನಗರಕ್ಕೆ ಮಾತ್ರ ಸೀಮೀತವಾಗಿತ್ತು. ಈಗ ಚೀನಾ ರಾಜಧಾನಿ ಬೀಜಿಂಗ್ನಲ್ಲೂ ಈ ಸೋಂಕು ಪತ್ತೆ ಆಗಿರುವುದು ಅಲ್ಲಿನ ನಾಯಕರಲ್ಲಿ ಭಯ ಸೃಷ್ಟಿಯಾಗಿದೆ.
Comments are closed.