ಅಂತರಾಷ್ಟ್ರೀಯ

ಇನ್ನೆರಡು ವಾರದಲ್ಲಿ ಮಾರಕ ಕೊರೋನಾ ವೈರಸ್ ಲಸಿಕೆಯ ಪ್ರಯೋಗದ ಫಲಿತಾಂಶ ಲಭ್ಯ !

Pinterest LinkedIn Tumblr

ವಿಶ್ವಸಂಸ್ಥೆ: ಇನ್ನೆರಡು ವಾರದಲ್ಲಿ ಮಾರಕ ಕೊರೋನಾ ವೈರಸ್ ಲಸಿಕೆಯ ಮಾನವ ಪ್ರಯೋಗದ ಫಲಿತಾಂಶಗಳು ಲಭ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ.ಟೆಡ್ರೋಸ್ ಅಧನೋಮ್ ಅವರು, ವಿಶ್ವದ 39 ದೇಶಗಳ ವಿಜ್ಞಾನಿಗಳು ತಯಾರಿಸಿರುವ ಲಸಿಕೆಯ ಮಾನವ ಪ್ರಯೋಗದ ಫಲಿತಾಂಶ ಇನ್ನೆರಡು ವಾರದಲ್ಲಿ ಲಭ್ಯವಾಗಲಿದೆ. ಈ ಪರೀಕ್ಷೆಗಾಗಿ ಜಗತ್ತಿನಾದ್ಯಂತ ಐದು ಸಾವಿರಕ್ಕೂ ಅಧಿಕ ಕೋವಿಡ್-19 ಸೋಂಕಿತರನ್ನು ಬಳಸಿಕೊಳ್ಳಲಾಗಿದ್ದು, ಅವರ ಮೇಲೆ ಈ ಲಸಿಕೆಗಳ ಪ್ರಯೋಗ ಮಾಡಲಾಗಿದೆ. ಈ ಪ್ರಯೋಗದ ಫಲಿತಾಂಶ ಇನ್ನೆರಡು ವಾರದಲ್ಲಿ ಲಭ್ಯವಾಗಲಿದೆ.

ಮೂಲಗಳ ಪ್ರಕಾರ 39 ದೇಶಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೇ ವಿವಿಧ ರೀತಿಯ ಲಸಿಕೆಗಳ ಪ್ರಯೋಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಈ ಲಸಿಕೆಯ ಪ್ರಯೋಗ ಈಗಾಗಲೇ ಸೋಂಕಿತರ ಮೇಲೆ ನಡೆದಿದೆ ಎನ್ನಲಾಗಿದೆ. ಇದರ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ಚಿಕಿತ್ಸೆಗೆ ರೆಮ್ಡೆಸಿವಿರ್, ಹೈಡ್ರಾಕ್ಸಿಕ್ಲೋರೋಕ್ವಿನ್, ಲೋಪಿನಾವಿರ್ / ರಿಟೊನವಿರ್ ಬಳಕೆ ಸೂಚಿಸಿತ್ತು. ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ನಿಂದ ಪ್ರಯೋಜನವಿಲ್ಲ ಎಂದು ಹೇಳಿ ಬಹುತೇಕ ದೇಶಗಳು ಈ ಔಷಧಿಯ ಬಳಕೆ ಮತ್ತು ಪ್ರಯೋಗ ಕೈ ಬಿಟ್ಟಿವೆ. ಅಮೆರಿಕದ ರೆಮ್ಡೆಸಿವಿರ್ ಲಸಿಕೆ ಮೇಲೆ ಒಂದಷ್ಟು ಪ್ರಯೋಗ ನಡೆಯುತ್ತಿದೆ. ಇತ್ತ ಭಾರತದಲ್ಲಿ ಕೋವ್ಯಾಕ್ಸಿನ್ ಲಸಿಕೆ ಉತ್ತಮ ಫಲಿತಾಂಶ ನೀಡಿದ್ದು, ಇದರ ಬಳಕೆಗೆ ಐಸಿಎಂಆರ್ ನಿರ್ದೇಶನ ನೀಡುವ ಸಾಧ್ಯತೆ ಇದೆ.

Comments are closed.