ಅಂತರಾಷ್ಟ್ರೀಯ

ಕೊರೊನಾ ಭೀತಿಗೆ 1 ಲಕ್ಷದಷ್ಟು ಮಿಂಕ್ ಪ್ರಾಣಿಗಳ ಹತ್ಯೆಗೆ ಸ್ಪೇನ್ ಆದೇಶ..!

Pinterest LinkedIn Tumblr


ಮಿಂಕ್‌ ಫಾರ್ಮ್‌ನ ಒಬ್ಬ ಸಿಬ್ಬಂದಿಗೆ ಕೊರೊನಾ ತಗುಲಿದ ಕಾರಣ ಸುಮಾರು 1 ಲಕ್ಷದಷ್ಟು ಮಿಂಕ್‌ ಪ್ರಾಣಿಗಳನ್ನು ಕೊಲ್ಲೋಕೆ ಸ್ಪೇನ್‌ ರಾಷ್ಟ್ರ ಆದೇಶಿಸಿದೆ. ಮಿಂಕ್‌ ಫಾರ್ಮ್‌ನ ಆರು ಮಂದಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಅವರ ಮೂಲಕ ಮಿಂಕ್‌ ಪ್ರಾಣಿಗಳಿಗೂ ಕೊರೊನಾ ಕಾಣಿಸಿಕೊಂಡಿದೆ. ಹೀಗಾಗಿ ಸುಮಾರು ಒಂದು ಲಕ್ಷದಷ್ಟು ಮಿಂಕ್‌ಗಳನ್ನು ಕೊಲ್ಲಲು ಆದೇಶಿಸಲಾಗಿದೆ.

ಮ್ಯಾಡ್ರಿಡ್:ಕೊರೊನಾ ಮಹಾಮಾರಿ ಇಡಿ ಜಗತ್ತನ್ನೇ ತಲ್ಲಣಗೊಳಿಸಿದೆ. ವಿಶ್ವದ ಅನೇಕ ದೇಶಗಳು ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಇನ್ನೂ ಹೊರಬರಲಾರದೆ ಒದ್ದಾಡ್ತಿದೆ. ಭಾರತ ಕೂಡ ಇದರಿಂದ ಹೊರತೇನಲ್ಲ. ಈ ಮಧ್ಯೆ ಮನುಷ್ಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಎಂತಹ ಹೇಯ ಕೃತ್ಯ ಮಾಡೋಕೂ ಹೇಸಲ್ಲ ಅನ್ನೋದಕ್ಕೆ ಸ್ಪೇನ್‌ ರಾಷ್ಟ್ರ ಸಾಕ್ಷಿಯಾಗಿದೆ.

ಕೊರೊನಾ ರೋಗ ಉಂಟಾಗಲು ಕಾರಣ ಏನು ಅನ್ನೋದು ಇನ್ನೂ ಬಹಿರಂಗವಾಗಿಲ್ಲ. ವಿಜ್ಞಾನಿಗಳು ಕೂಡ ಈ ಬಗ್ಗೆ ನಿರಂತರ ಅಧ್ಯಯನದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಮಿಂಕ್‌ ಫಾರ್ಮ್‌ನ ಒಬ್ಬ ಸಿಬ್ಬಂದಿಗೆ ಕೊರೊನಾ ತಗುಲಿದ ಕಾರಣ ಸುಮಾರು 1 ಲಕ್ಷದಷ್ಟು ಮಿಂಕ್‌ ಪ್ರಾಣಿಗಳನ್ನು ಕೊಲ್ಲೋಕೆ ಸ್ಪೇನ್‌ ರಾಷ್ಟ್ರ ಆದೇಶಿಸಿದೆ. ಮಿಂಕ್‌ ಫಾರ್ಮ್‌ನ ಆರು ಮಂದಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಅವರ ಮೂಲಕ ಮಿಂಕ್‌ ಪ್ರಾಣಿಗಳಿಗೂ ಕೊರೊನಾ ಕಾಣಿಸಿಕೊಂಡಿದೆ. ಹೀಗಾಗಿ ಸುಮಾರು ಒಂದು ಲಕ್ಷದಷ್ಟು ಮಿಂಕ್‌ಗಳನ್ನು ಕೊಲ್ಲಲು ಆದೇಶಿಸಲಾಗಿದೆ.

ಆದರೆ ಕೊರೊನಾ ಪ್ರಾಣಿಗಳಿಂದ ಮನುಷ್ಯರಿಗೆ ಬಂದಿದೆಯೋ ಅಥವಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡಿದೆಯೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 13ರಂದು ಪುಯೆಬ್ಲಾ ಡೆ ವಾಲ್ವೆರ್ಡ್ ಪ್ರದೇಶದಲ್ಲಿರೋ ಮಿಂಕ್‌ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿರುವ ಏಳು ಮಂದಿಗೆ ಕೊರೊನಾ ಕಾಣಿಸಿಕೊಂಡಿತ್ತು. ಅದೇ ಫಾರ್ಮ್‌ನಲ್ಲಿರೋ ಮಿಂಕ್‌ಗಳಿಗೆ ಕೊರೊನಾ ಟೆಸ್ಟ್‌ ಮಾಡಿಸಿದಾಗ ಸುಮಾರು 87% ಮಿಂಕ್‌ಗಳಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಮನುಷ್ಯರಿಗೆ ಹರಡುತ್ತೆ ಅನ್ನುವ ಕಾರಣಕ್ಕಾಗಿ ಬರೋಬ್ಬರಿ 92,700 ಮಿಂಕ್‌ಗಳನ್ನು ಕೊಲ್ಲಲು ಅಲ್ಲಿನ ಆರೋಗ್ಯಾಧಿಕಾರಿಗಳು ಆದೇಶಿಸಿದ್ದರು.

ಮಿಂಕ್‌ ಅನ್ನೋದು ಮಾಂಸಾಹಾರಿ ಸಸ್ತನಿಗಳಾಗಿದ್ದು, ತನ್ನ ವಿಶಿಷ್ಟ ರೋಮಗಳಿಂದಾಗಿಯೇ ಆಕರ್ಷಿತಗೊಂಡು ಸಾಕಲ್ಪಡುತ್ತವೆ. ಇದರಲ್ಲಿ ಅಮೆರಿಕನ್‌ ಮಿಂಕ್ ಮತ್ತು ಯುರೋಪಿಯನ್ ಮಿಂಕ್‌ಗಳೆಂಬ ಎರಡು ಜಾತಿಗಳಿವೆ.

Comments are closed.