ಅಂತರಾಷ್ಟ್ರೀಯ

ಬೆಂಕಿ ಹಚ್ಚಿಕೊಂಡು ಪ್ರಪೋಸ್​ ಮಾಡಿದ

Pinterest LinkedIn Tumblr


ಪ್ರೀತಿ ಯಾವಾಗ ಯಾರಾ ಮೇಲೆ ಬೇಕಾದರೂ ಆಗಬಹುದು. ಅಂದಹಾಗೆಯೇ ಇಲ್ಲೊಬ್ಬರು 52 ವರ್ಷದ ವಯಸ್ಸಿನ ವ್ಯಕ್ತಿಗೆ 48 ವರ್ಷದ ಮಹಿಳೆಯೊಬ್ಬರ ಮೇಲೆ ಪ್ರೀತಿ ಆಗಿದೆ. ಆದರೆ ವ್ಯಕ್ತಿ ಆ ಮಹಿಳೆಗೆ ಪ್ರೊಪೋಸ್​ ಮಾಡಿರುವ ರೀತಿ ಮಾತ್ರ ವಿಭಿನ್ನವಾಗಿದೆ. ಅಷ್ಟು ಮಾತ್ರವಲ್ಲ, ಆ ವಿಡಿಯೋ ವೈರಲ್​ ಕೂಡ ಆಗಿದೆ.

52 ವರ್ಷದ ರಿಕಿ ಆಶ್​​ 48 ವರ್ಷದ ಕತ್ರೀನಾ ಮೇಲೆ ಪ್ರೀತಿ ಚಿಗುರೊಡೆದಿತ್ತು. ಕೊನೆಗೂ ಈ ವಿಚಾರವನ್ನು ಆತ ಪ್ರೊಪೊಸ್​ ಮಾಡುವ ಮೂಲಕ ಹೇಳಿಕೊಂಡಿದ್ದಾನೆ. ಆದರೆ ರಿಕಿ ಮೈಮೇಲೆ ಬೆಂಕಿ ಹಂಚಿಕೊಂಡು ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿದ್ದಾನೆ.

ರಿಕಿ ಆಶ್​ ವೃತ್ತಿಪರ ಸ್ಟಂಟ್​ ಮ್ಯಾನ್​. ಕತ್ರೀನಾ​ ವೃತ್ತಿಯಲ್ಲಿ ನರ್ಸ್​. ರಿಕಿಗೆ ಆಕೆಯ ಜೊತೆಗೆ ಪ್ರೀತಿ ಹಂಚಿಕೊಳ್ಳಲು ಕೊನೆಗೆ ಸ್ಟಂಟ್​ ಮಾಡಬೇಕಾಯಿತು. ರಿಕಿ ಆಕೆಗೆ ವಿಭಿನ್ನವಾಗಿ ಪ್ರಪೋಸ್​ ಮಾಡಬೇಕೆಂದು ಫೋಟೋಶೂಟ್​​​ ಮಾಡಿಕೊಂಡಿದ್ದಾನೆ. ಬೆಂಕಿ ಹಚ್ಚಿಕೊಂಡು ಪ್ರಪೋಸ್​ ಮಾಡಿದ್ದಾನೆ.

ಕೊನೆಗೆ ರಿಕಿ ಮೈಮೇಲೆ ಬೆಂಕಿ ಆವರಿಸುತ್ತಾ ಹೋದಂತೆ ಕತ್ರೀನಾ ಆತನ ಪ್ರೇಮ ನಿವೇದನೆಯನ್ನು​ ಒಪ್ಪಿಕೊಂಡಿದ್ದಾಳೆ.

ಕತ್ರೀನಾ ಈ ಬಗ್ಗೆ ಮಾತನಾಡಿದ್ದು, ‘ರಿಕಿ ಮೈ ಮೇಲೆ ಬೆಂಕಿ ಹಂಚಿಕೊಂಡಾಗ ಕೈಗಳನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದನು. ನಾನು ಆತನನ್ನು ನೋಡಿ ಇವನ್ಯಾಕೆ ಕೈ ಜೇಬಿನಲ್ಲಿರಿಸಿಕೊಂಡಿದ್ದಾನೆ ಎಂದು ಅಂದುಕೊಂಡೆ. ನಂತರ ರಿಕಿ ಉಂಗುರವನ್ನು ತೆಗೆದನು’ ಎಂದು ಹೇಳಿದರು.

ರಿಕಿ ಅಮೆರಿಕಾ ಮೂಲಕ ಸ್ಟಂಟ್​ಮ್ಯಾನ್​ ಆಗಿದ್ದು, 27 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ರಿಚರ್ಡ್​ ಬರ್ಟನ್​, ಜಾನಿ ಡೆಪ್​ ಮುಂತಾದ ಖ್ಯಾತನಾಮರೊಂದಿಗೆ ಕೆಲಸ ಮಾಡಿದ ಅನುಭವವಿದೆ. ಹಲವಾರು ಜಾಹೀರಾತು ಮತ್ತು ಸಿನಿಮಾ ಮತ್ತು ದೂರದರ್ಶನ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದಾರೆ.

Comments are closed.