ಚೀನಾ ಮತ್ತು ಭಾರತ ನಡುವೆ ಗಡಿವಿವಾದ ನಡೆಯುತ್ತಿದ್ದು, ಹೀಗಿರುವಾಗ ಚೀನಾದಿಂದ ಬಂದಂತಹ ಯಾಕ್ ಪ್ರಾಣಿಗಳ ಹಿಂಡು ಸಂಶಯಕ್ಕೆ ಎಡೆಮಾಡಿದೆ.
ಜಾನುವಾರುಗಳು ಮುಗ್ಧ ಜೀವಿಗಳೇ ಆಗಿದ್ದರು ಅವು ಚೀನಾಗೆ ಸೇರಿದ್ದಾಗಿದ್ದರಿಂದ ಸಂಶಯ ಬರದೇ ಇರದು. ಭಾರತ ಮತ್ತು ಚೀನಾ ದೇಶಗಳ ಯೋಧರು ಲಡಾಖ್‌ನ ಪ್ಯಾಂಗೊಂಗ್ ಸರೋವರದ ದಕ್ಷಿಣದಲ್ಲಿ ಜಮಾವಣೆಗೊಳ್ಳುತ್ತಿದ್ದ ಸಮಯದಲ್ಲೇ ಈ ಪ್ರಾಣಿಗಳ ಹಿಂಡು ಗಡಿ ದಾಟಿ ಬಂದಿದ್ದವು,ಈ ವೇಳೆ ಅಲ್ಲಿಯೇ ಇದ್ದ ಭಾರತೀಯ ಸೈನಿಕರು ಅವುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. 7 ದಿನಗಳವರೆಗೆ ಅವುಗಳ ಪಾಲನೆ ಮಾಡಿದ್ದ ಯೋಧರು ಮಾನವೀಯತೆ ದೃಷ್ಠಿಯಿಂದ ಚೀನಾ ಮಾಲೀಕರಿಗೆ ಹಿಂದಿರುಗಿಸಿದ್ದರು.
ಪ್ರಾಣಿಗಳನ್ನು ಬಳಸಿ ಮಾಹಿತಿಗಳನ್ನು ಪಡೆದ ಅನೇಕ ಉದಾಹರಣೆಗಳನ್ನು ಕಣ್ಣ ಮುಂದೆ ಇರುವಾಗ ಯಾಕ್ ಪ್ರಾಣಿಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ ಎಂಬುದು ತಜ್ಞರ ಅಭಿಮತವಾಗಿದೆ
ಯಾಕ್ ಪ್ರಾಣಿ ಬೇಹುಗಾರಿಕಾ ಸಾಧನ ಎಂಬ ಸಂಶಯ ?
ಯಾಕ್ ಪ್ರಾಣಿಗಳನ್ನು ಇಂಡಿಯನ್ ಆರ್ಮಿ ಮಾನವೀಯತೆ ದೃಷ್ಠಿಯಿಂದ ಹಿಂದಿರುಗಿಸಿತು. ಆದರೆ, ಇದೇ ಯಾಕ್ಗಳಲ್ಲಿ ಬೇಹುಗಾರಿಕಾ ಸಾಧನವಿರಬಹುದಾ ಎಂಬ ಪ್ರಶ್ನೆ ಮೂಡಿದ್ದು, ಅದನ್ನು ತಳ್ಳಿಹಾಕುವಂತಿಲ್ಲ. ಉದಾಹರಣೆ ಕಳೆದ ವರ್ಷದ ಏಪ್ರಿಲ್ನಲ್ಲಿ ನಾರ್ವೆ ಕರಾವಳಿಯಲ್ಲಿ ಬೆಲುಗಾ ತಿಮಿಂಗಿಲವನ್ನು ಹಿಡಿಯಲಾಗಿತ್ತು. ತುಂಬಾ ಬುದ್ಧಿವಂತ ಹಾಗೂ ಸ್ನೇಹ ಸ್ವಭಾವದ ಪ್ರಾಣಿಯಾಗಿರುವ ಬೆಲುಗಾ ತಲೆಯ ಸುತ್ತ ಗುಪ್ತಚರ ಇಲಾಖೆಗೆ ಸೂಚನೆ ನೀಡುವಂತಹ ಎಲೆಕ್ಟ್ರಾನಿಕ್ ಸಾಧನವನ್ನು ಅಳವಡಿಸಲಾಗಿತ್ತು.
Comments are closed.