ಅಂತರಾಷ್ಟ್ರೀಯ

ಬಾಡಿಗೆ ತಾಯ್ತನದ ಮೂಲಕ ಮಗಳಿಗೆ ಮಗು ಹೆತ್ತುಕೊಟ್ಟ ತಾಯಿ!

Pinterest LinkedIn Tumblr


51 ವರ್ಷದ ಮಹಿಳೆಯೊಬ್ಬಳು ತನ್ನ ಮಗಳಿಗೆ ಬಾಡಿಗೆ ತಾಯ್ತನದ ಮೂಲಕ ಮೊಮ್ಮಗಳಿಗೆ ಜನ್ಮ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು. ಅಮೆರಿಕದಲ್ಲಿ ಈ ಘಟನೆ ನಡೆದಿದೆ. ಹೀಗೊಂದು ಅಚ್ಚರಿಯ ಪ್ರಕರಣ ಅನೇಕರನ್ನು ಬೆರಗುಗೊಳಿಸಿದೆ. ಹಲವರು ಇದು ಹೇಗೆ ಸಾಧ್ಯವೆಂದು ಮಾತನಾಡುತ್ತಿದ್ದಾರೆ. ಆದರೆ ಮಗಳ ಆಸೆಯನ್ನು ಈಡೇರಿಸಲು ತಾಯಿ ಗರ್ಭಧರಿಸಿ ಮೊಮ್ಮಳಿಗೆ ಜನ್ಮ ನೀಡಿರುವುದಂತು ಸತ್ಯ.

ಚಿಕಾಗೊ ಮೂಲಕ ಇಲಿನಾಯ್ಸ್​ ನಗರದಲ್ಲಿ ವಾಸಿಸುವ 29 ವರ್ಷದ ಬ್ರೆನ್ನಾ ಲಾಕ್ವಡ್​ ಗರ್ಭಿಣಿ ಆಗಲು ಸಾಕಷ್ಟು ಪ್ರಯತ್ನ ಪಡುತ್ತಾಳೆ. ಆದರೆ ಆಕೆಗೆ ಗರ್ಭನಿಲ್ಲದೆ ಆಗಾಗ ಗರ್ಭಪಾತಕ್ಕೆ ಒಳಗಾಗುತ್ತಿದ್ದಳು. ಪತಿ ಆ್ಯರೂನ್​ ಕೂಡ ಆಕೆಯನ್ನು ಡಾಕ್ಟರ್​ ಬಳಿ ಕರೆದೊಯ್ದು ತೋರಿಸಿದನು. ಆತನು ಕೂಡ ಪ್ರನಾಳೀಯ ಫಲೀಕರನ (ಐವಿಎಫ್​) ಮಾಡಲು ಮುಂದಾದನು. ಆದರೆ ಏನೇ ಮಾಡಿದರು ಬ್ರೆನ್ನಾ ಲಾಕ್ವಡ್​ಗೆ ಗರ್ಭ ನಿಲ್ಲುತ್ತಿರಲಿಲ್ಲ. ಹೀಗೆ ದಂಪತಿಗಳು 4 ವರ್ಷದಿಂದ ನಾನಾ ಪ್ರಯತ್ನ ಮಾಡಿದರು ಫಲಿಸಲಿಲ್ಲ.

ಕೊನೆಗೆ ಡಾಕ್ಟರ್ ಮಗು ಬೇಕೆಂದರೆ​ ಬಾಡಿಗೆ ತಾಯ್ತನವೊಂದೆ ದಾರಿ ಎಂದು ಬ್ರೆನ್ನಾ ಲಾಕ್ವಡ್​ ಮತ್ತು ಆ್ಯರೂನ್​ ಬಳಿ ಹೇಳಿದರು. ಕೊನೆಗೂ ಗರ್ಭಧರಿಸಲಾಗಿಲ್ಲವೆಂದು ನೊಂದಿದ್ದ ಬ್ರೆನ್ನಾ ಲಾಕ್ವಡ್​ಗೆ ಆಕೆಯ ತಾಯಿ ಜೂಲಿ ಬಂದು ನೆರವಾಗುತ್ತಾರೆ.

ಬಾಡಿಗೆ ತಾಯ್ತನದ ಮೂಲಕ ಮಗಳಿಗೆ ಮಗು ಹೆತ್ತು ಕೊಡಲು ಜೂಲಿ ಮುಂದಾಗುತ್ತಾರೆ. ನಂತರ ಗರ್ಭಧರಿಸಿದ ಜೂಲಿ ನವೆಂಬರ್​ 2ರಂದು ಮುದ್ದಾದ ಮೊಮ್ಮಗಳು ಬ್ರಿಯಾರ್​ ಜೂಲಿಯೆಟ್​ ಲಾಕ್ವಡ್​ಗೆ ಜನ್ಮ ನೀಡುತ್ತಾರೆ.

ತಾಯಿ ಮಾಡಿದ ತ್ಯಾಗವನ್ನು ಬ್ರೆನ್ನಾ ಲಾಕ್ವಡ್​ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾಳೆ. ನನ್ನ ತಾಯಿ ರಾಕ್​ಸ್ಟಾರ್​. ಹೆರಿಗೆ ವೇಳೆ ನೋವಾದರು ಯಾವುದಕ್ಕೂ ಹೆದರದೆ ಮಗುವಿಗೆ ಜನ್ಮ ನೀಡಿದ್ದಾಳೆ. ಹೆಣ್ಣು ಮಗು ನಮ್ಮ ಕುಟುಂಬಕ್ಕೆ ಸಂತಸ ತಂದಿದ್ದಾಳೆ ಎಂದು ಬರೆದುಕೊಂಡಿದ್ದಾಳೆ.

Comments are closed.