ಅಂತರಾಷ್ಟ್ರೀಯ

4ನೇ ಮದುವೆಗೆ ಸಿದ್ದನಾದ ಪಾಕ್ ಯುವಕನಿಗೆ ಹೆಂಡತಿಯರಿಂದಲೇ ವಧು ಹುಡುಕಾಟ!

Pinterest LinkedIn Tumblr


ಕರಾಚಿ: 3 ಮದುವೆಯಾಗಿ 4ನೇ ಮದುವೆಗೆ ಮುಂದಾಗುವುದನ್ನು ಎಲ್ಲದರೂ ನೋಡಿದ್ದೀರಾ? ಅದರಲ್ಲೂ ಈ ಪತ್ನಿಯರೇ ಪತಿರಾಯನಿಗೆ ನಾಲ್ಕನೇ ವಧುವನ್ನು ಹುಡುಕುತ್ತಿರುವ ವಿಚಿತ್ರ ಘಟನೆ ಬಗ್ಗೆ ಕೇಳಿದ್ದೀರಾ? ಖಂಡಿತ ಇಲ್ಲ ಅನಿಸುತ್ತೆ.

ಆದರೆ ಪಾಕಿಸ್ತಾನದಲ್ಲಿ ಇಂತಹ ಒಂದು ಡಿಫರೆಂಟ್ ಫ್ಯಾಮಿಲಿ ಇದೆ. ಹೌದು, 20 ವರ್ಷದ ಪಾಕಿಸ್ತಾನಿ ಯುವಕನೊಬ್ಬ ಮೂರು ಮದುವೆಯಾಗಿರುವುದಲ್ಲದೇ ಇದೀಗ ನಾಲ್ಕನೇ ಮದುವೆಗೆ ಮುಂದಾಗಿದ್ದಾನೆ. ಇನ್ನು ಪತಿಯ ಮದುವೆಗೆ ಮೂವರು ಪತ್ನಿಯರು ಸಹಾಯ ಮಾಡುತ್ತಿದ್ದು, ವಧುವಿನ ಹುಡುಕಾಟ ನಡೆಸುತ್ತಿದ್ದಾರೆ. ಪಾಕಿಸ್ತಾನದ ಸಿಯಾಲ್‌ಕೋಟ್‌ನ ಅದ್ನಾನ್‌ ಎನ್ನುವ ಯುವಕನಿಗೆ 16ನೇ ವಯಸ್ಸಿನಲ್ಲಿ ಮೊದಲ ಮದುವೆಯಾಗಿತ್ತು.

ಬಳಿಕ ಮೂರು ವರ್ಷಗಳ ನಂತರ ಮತ್ತೊಂದು ಅಂದರೆ ಎರಡನೇ ವಿವಾಹವಾಗಿದೆ. ಇನ್ನು ಕಳೆದ ವರ್ಷ ಮತ್ತೊಂದು ಮದುವೆ ಆಗಿದ್ದು ಒಟ್ಟಾರೆ ಮೂರು ಮದುವೆಯಾಗಿದ್ದಾನೆ. ಇಂಟ್ರೆಸ್ಟಿಂಗ್‌ ಸಂಗತಿ ಎಂದರೆ ಎರಡನೇ ಮದುವೆಗೆ ಮೊದಲನೇ ಪತ್ನಿ ಹಾಗೂ ಮೂರನೇ ಮದುವೆಗೆ ಎರಡನೇ ಪತ್ನಿ ಅನುಮತಿ ನೀಡಿದ ನಂತರವೇ ಈ ಅದ್ನಾನ್‌ ವಿವಾಹವಾಗಿದ್ದಾನೆ. ಈ ಬಗ್ಗೆ ಡೈಲಿ ಪಾಕಿಸ್ತಾನ ಅನ್ನುವ ಮಾಧ್ಯಮದಲ್ಲಿ ವರದಿ ಮಾಡಲಾಗಿದೆ.

ಇನ್ನು ಮೊದಲ ಪತ್ನಿಯಲ್ಲಿ ಮೂವರು ಮಕ್ಕಳಿದ್ದು, ಎರಡನೇ ಪತ್ನಿಗೆ ಒಂದು ಹೆಣ್ಣು ಮಗುವಿದೆ. ಇನ್ನು ಮೂವರು ಪತ್ನಿಯರ ಹೆಸರು ‘S’‌ ಎಂಬ ಅಕ್ಷರದಿಂದ ಆರಂಭವಾಗಿದ್ದು, ನಾಲ್ಕನೇ ಪತ್ನಿಯ ಹೆಸರು ಕೂಡ ‘S’ ‌ನಿಂದಲೇ ಆರಂಭವಾಗುವ ಹೆಸರಿನ ಯುವತಿಗಾಗಿ ಇದೀಗ ಅದ್ನಾನ್‌ ಹಾಗೂ ಆತನ ಮೂವರು ಪತ್ನಿಯರು ಹುಡುಕಾಟ ನಡೆಸುತ್ತಿದ್ದಾರೆ.

ಇನ್ನು ಅಲ್ಲಿನ ಮಾಧ್ಯಮಗಳ ಜೊತೆ ಮಾತನಾಡಿದ್ದ ಅದ್ನಾನ್‌, ನನಗೆ ಮೂವರು ಪತ್ನಿಯರು ಕೂಡ ಇಷ್ಟ. ಎಲ್ಲರ ಜೊತೆ ಕಾಲ ಕಳೆಯಲು ಸಮಯ ನೀಡುತ್ತಿದ್ದೇನೆ ಹಾಗೂ ನಾನು ಸಂತೋಷದಿಂದ ಇದ್ದೇನೆ ಎಂದು ತಿಳಿಸಿದ್ದಾನೆ. ಆಫರ್‌ ಬಂದಂತೆ ಮದುವೆಯಾಗಿದ್ದೇನೆ ಅಷ್ಟೇ ಎಂದಿದ್ದಾರೆ. ಇನ್ನು ಪತ್ನಿಯರು ಕೂಡ ಅದ್ನಾನ್‌ ಬಗ್ಗೆ ಹಾಡಿ ಹೊಗಳಿದ್ದು, ಅದ್ನಾನ್‌ ತುಂಬಾ ಒಳ್ಳೆ ವ್ಯಕ್ತಿ ಅವರು ಖುಷಿಯಿಂದ ಇರಬೇಕು ಎನ್ನುವ ಉದ್ದೇಶದಿಂದ ನಾವು ಮದುವೆ ಮಾಡಿಸುತ್ತಿದ್ದೇವೆ ಎಂದಿದ್ದಾರೆ.

Comments are closed.