ಮಾನವನಿಗೆ ಒಂದು ವೇಳೆ ಊಟ ಇಲ್ಲದಿದ್ದರೂ ನಡೆಯುತ್ತದೆ. ಆದರೆ ನಿದ್ದೆ ಇಲ್ಲದೇ ಜೀವನ ನಡೆಸುವುದು ಭಾರೀ ಕಷ್ಟ. ದಿನಕ್ಕೆ ಕನಿಷ್ಟ ಆರು ಗಂಟೆ ನಿದ್ದೆ ಮಾಡಲೇಬೇಕು ಎನ್ನುತ್ತಾರೆ. ಅದಕ್ಕಿಂತಲೂ ಕಡಿಮೆ ನಿದ್ದೆ ಮಾಡಿದರೆ ಕೂತಲ್ಲೂ ತೂಕಡಿಸುವ ತಾಪತ್ರಯ ಬರಬಹುದು. ಆದರೆ ಇಲ್ಲೋರ್ವ ವ್ಯಕ್ತಿ ಇದ್ದಾನೆ. ಈತನಿಗೆ ನಿದ್ದೆ ಮಾಡುವುದೇ ಮರೆತುಹೋದಂತಿದೆ. ಏಕೆಂದರೆ ಈತ ಬರೋಬ್ಬರಿ 40 ವರ್ಷದಿಂದ ನಿದ್ದೆಯನ್ನೇ ಮಾಡಿಲ್ಲವಂತೆ..!
ವಿಯೇಟ್ನಾಂ ದೇಶದ ಟ್ರಂಗ್ ಹಾ ಎಂಬ ಹಳ್ಳಿಯ ಥಾಯ್ ಯಿಂಗಾಕ್ ಎಂಬ ವ್ಯಕ್ತಿ ಕಳೆದ 46 ವರ್ಷಗಳಿಂದ ನಿದ್ದೆಯನ್ನೇ ಮಾಡದೇ ವಿಜ್ಞಾನಕ್ಕೆ ಸವಾಲಾಗಿದ್ದಾರೆ. ಇಷ್ಟು ದಿನಗಳ ಅವಧಿಯಲ್ಲಿ ಥಾಯ್ ಯಿಂಗಾಕ್ ಒಂದೇ ಒಂದು ಬಾರಿ ಮಲಗಿಲ್ಲ ಎಂದರೆ ಅಚ್ಚರಿಯ ಸಂಗತಿ. ವೈದ್ಯರೂ ಕೂಡ ಹಲವು ಬಾರಿ ಇವರನ್ನು ಪರೀಕ್ಷೆಗೆ ಒಳಪಡಿಸಿದ್ದರೂ ನಿದ್ರೆ ಮಾಡದ ಈತನ ಒಳ ಮರ್ಮ ಏನೆಂಬುದನ್ನು ತಿಳಿಯಲು ಸಾಧ್ಯವಾಗಿಲ್ಲ. ಸದಾ ಕಾಲ ಚಟುವಟಿಕೆಯಿಂದ ಕೂಡಿರುವ ಇವರ ಬಗ್ಗೆ ವೈದ್ಯರು ಕೂಡ ಅಚ್ಚರಿ ವ್ಯಕ್ತಪಡಿಸುತ್ತಾರೆ.
1973 ರಲ್ಲಿ ಥಾಯ್ ಯಿಂಗಾಕ್ ಗೆ ಒಮ್ಮೆ ಜ್ವರ ಬಂದಿತ್ತು. ಅಂದಿನಿಂದ ಅವರು ನಿದ್ರೆಯನ್ನೇ ಮಾಡಿಲ್ಲ. ದೇಹ ದಣಿದಾಗ ನಿದ್ದೆ ಮಾಡಬೇಕು. ಇದರಿಂದ ದೇಹಕ್ಕೆ ವಿಶ್ರಾಂತಿ ದೊರೆತು ಲವಲವಿಕೆಯಿಂದ ಇರಲು ಸಾಧ್ಯ ಎನ್ನುತ್ತಾರೆ ವೈದ್ಯರು. ಆದರೆ ವೈದ್ಯ ಲೋಕಕ್ಕೇ ಸವಾಲಾಗುವಂತೆ ಈತ ನಿದ್ದೆಯನ್ನೇ ಮಾಡದೇ ಚಟುವಟಿಕೆಯಿಂದ ಕೆಲಸ ಮಾಡುತ್ತಾನೆ ಎಂದು ಹೇಳಲಾಗಿದೆ.
ಈತ ಕೋ ಟ್ರಂಗ್ ಎಂಬ ಬೆಟ್ಟದ ಪಕ್ಕದಲ್ಲಿರುವ ವಾಸಿಸುತ್ತಿದ್ದಾನೆ. ಈತ ಕೃಷಿ, ಕೋಳಿ, ಹಂದಿ ಸಾಕಣೆಯನ್ನು ಮಾಡುತ್ತಾನೆ. ಇನ್ನು ರಾತ್ರಿ ವೇಳೆಯಲ್ಲಿ ಕಳ್ಳಕಾಕರನ್ನು ಕಾಯುತ್ತಾ ಚಟುವಟಿಕೆಯಿಂದಿರುತ್ತಾನೆ. ವಿಶೇಷವೆಂದರೆ ಸುಮಾರು 46 ವರ್ಷದಿಂದ ನಿದ್ದೆಯನ್ನೇ ಮಾಡದಿದ್ದರೂ ಕೂಡಾ ಥಾಯ್ ಯಿಂಗಾಕ್ ಸದೃಢ ಹಾಗೂ ಆರೋಗ್ಯದಿಂದಿದ್ದಾನೆ..!
Comments are closed.