ನೇಪಾಳ ಹಾಗೂ ಚೀನಾ ಜಂಟಿಯಾಗಿ ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಪರಿಷ್ಕೃತ ಎತ್ತರ 8,848.86 ಮೀಟರ್ ಎಂದು ಹೇಳಿವೆ. ಈ ಎತ್ತರ 1954ರಲ್ಲಿ ಭಾರತ ಅಳತೆ ಮಾಡಿದ ಎತ್ತರಕ್ಕಿಂತ 86 ಸೆಂಟಿ ಮೀಟರ್ ಹೆಚ್ಚಿನದ್ದಾಗಿದೆ.
2015ರ ಭೀಕರ ಭೂಕಂಪ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮೌಂಟ್ ಎವರೆಸ್ಟ್ನ ಎತ್ತರದಲ್ಲಿ ಬದಲಾವಣೆ ಆಗಿರಬಹುದು ಎಂಬ ಶಂಕೆಯಿಂದಾಗಿ ನೇಪಾಳ ಸರ್ಕಾರ ಪರ್ವತದ ನಿಖರ ಎತ್ತರವನ್ನ ಅಳೆಯಲು ನಿರ್ಧರಿಸಿತು. ಹೀಗಾಗಿ ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ನ ಹೊಸ ಎತ್ತರ 8,848.86 ಮೀಟರ್ ಎಂದು ಚೀನಾ ಮತ್ತು ನೇಪಾಳ ಜಂಟಿಯಾಗಿ ಘೋಷಣೆ ಮಾಡಿದೆ.
Comments are closed.