ಅಂತರಾಷ್ಟ್ರೀಯ

ಅಮೆರಿಕದ ಡ್ರೋನ್ ದಾಳಿಗೆ ಪ್ರತಿದಾಳಿ ಶಂಕೆ; ಕಾಬೂಲ್ ವಿಮಾನ ನಿಲ್ದಾಣದ ಬಳಿ ಬಾಂಬ್ ಸ್ಫೋಟ

Pinterest LinkedIn Tumblr

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಉಳಿದಿರುವ ಅಮೆರಿಕ ಸೈನಿಕರು ಆಗಸ್ಟ್ 31ರ ಒಳಗಾಗಿ ಸ್ಥಳಾಂತರಗೊಳ್ಳಲು ಇನ್ನೇನು ಒಂದೇ ದಿನ ಬಾಕಿ ಉಳಿದಿರುವಂತೆಯೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಬಳಿ ಭಾರಿ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ರಾಕೆಟ್ ದಾಳಿ ಕಾರಣ ಎಂದು ತಿಳಿದುಬಂದಿದೆ.

ಕಾಬೂಲ್ ನ ಸಲೀಮ್ ಕರ್ವಾನ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಇದುವರೆಗೂ ಯಾವುದೇ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ. ಸ್ಫೋಟ ಸಂಭವಿಸಿದ ಮರುಕ್ಷಣವೇ ಗುಂಡಿನ ಚಕಮಕಿ ನಡೆದ ಸದ್ದು ಕೇಳಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಫೋಟದ ನಡುವೆಯೂ ಅಮೆರಿಕ ತನ್ನ ಸೈನಿಕರನ್ನು ಅಫ್ಘಾನಿಸ್ತಾನ ನೆಲದಿಂದ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದೆ.

ಭಾನುವಾರ ಆತ್ಮಹತ್ಯಾ ಬಾಂಬರ್ ಗಳು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಅಮೆರಿಕ ಡ್ರೋನ್ ದಾಳಿ ನಡೆಸಿ ಉಗ್ರರ ಸಂಚನ್ನು ವಿಫಲಗೊಳಿಸಿತ್ತು. ಅಮೆರಿಕದ ಸ್ಥಳಾಂತರ ಕಾರ್ಯಾಚರಣೆಗೆ ಧಕ್ಕೆ ಉಂಟುಮಾಡುವ ಉದ್ದೇಶವನ್ನು ಆತ್ಮಹತ್ಯಾ ಬಾಂಬರ್ ಗಳು ಹೊಂದಿದ್ದರು. ಆತ್ಮಹತ್ಯಾ ಬಾಂಬರ್ ಗಳು ಐಸಿಸ್ ಸಂಘಟನೆ ಸೇರಿದವರಾಗಿದ್ದರು. ಅದಕ್ಕೆ ಪ್ರತಿಯಾಗಿ ಇಂದು ಮುಂಜಾನೆ ಸ್ಫೋಟ ಸಂಭವಿಸಿದೆ ಎನ್ನಲಾಗುತ್ತಿದೆ.

Comments are closed.