ಅಂತರಾಷ್ಟ್ರೀಯ

ರೋಟರಿ ಸಂಸ್ಥೆಯ ಸ್ಥಾಪನಾ ದಿನಾಚರಣೆ : ಸಿಟಿ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ

Pinterest LinkedIn Tumblr

ಮಂಗಳೂರು ಫೆ. 24: ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ 119ನೇ ವಿಶ್ವ ರೋಟರಿ ದಿನಾಚರಣೆಯನ್ನು ನಗರದ ಹೋಟೆಲ್ ಉತ್ಸವ್ ಸಭಾಂಗಣದಲ್ಲಿ ತಾ| 23.02.2024 ರಂದು ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ರೊ| ಡಾ| ಪ್ರಶಾಂತ್ ರೈ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ ರೋಟರಿ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ಮಹತ್ವ ಹಾಗೂ ಉದ್ದೇಶವನ್ನು ವಿವರಿಸಿದರು. ಸಮಾಜಕ್ಕೆ ಬಹಳಷ್ಟು ಉತ್ತಮ ಸೇವೆಯನ್ನು ಮಾಡುವ ಸಾಧಕರನ್ನು ಗುರುತಿಸುವ ಕಾರ್ಯವನ್ನು ರೋಟರಿ ಸಂಸ್ಥೆ ಮಾಡುತ್ತಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ಅಂಗವಾಗಿ ನಗರದ ಖ್ಯಾತ ಯೋಗ ಶಾಸ್ತ್ರ ತಜ್ಞ ಹಾಗೂ ಗುರು ಯೋಗರತ್ನ ಗೋಪಾಲ ಕೃಷ್ಣ ದೇಲಂಪಾಡಿ ಹಾಗೂ 40 ವರ್ಷಗಳಿಂದ ಕ್ರಿಕೆಟ್ ಕ್ರೀಡೆಯ ತೀರ್ಪುಗಾರರಾಗಿ ಸೇವೆ ಸಲ್ಲಿಸುವ ರೋನಾಲ್ಡ್ ಪಿಂಟೋ ಅವರನ್ನು ಅವರು ಸಾಧಿಸಿದ ಸಾಧನೆ ಮತ್ತು ಅನುಪಮ ಸೇವೆಯನ್ನು ಪರಿಗಣಿಸಿ ರೋಟರಿ ಸಂಸ್ಥೆಯ ವಾರ್ಷಿಕ ವೃತ್ತಿಪರ ಸೇವಾ ಪ್ರಶಸ್ತಿಯನ್ನು ಪ್ರಧಾನ ಮಾಡಿ ಅಭಿನಂದಿಸಲಾಯಿತು.

ರೋಟರಿ ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಮತ್ತು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ರೊ| ಡಾ| ರಂಜನ್ ರವರು ಪ್ರಶಸ್ತಿ ವಿಜೇತರನ್ನು ಪರಿಚಯಿಸಿ ಅವರ ಸಾಧನೆಯ ವಿವರ ನೀಡಿದರು.

ಪ್ರಶಸ್ತಿ ಸ್ವೀಕರಿಸಿದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಕ್ರಿಕೆಟ್ ಕ್ರೀಡೆಯ ತೀರ್ಪುಗಾರರಾದ ರೋನಾಲ್ಡ್ ಪಿಂಟೋರವರು ರೋಟರಿ ಹಾಗೂ ವೃತ್ತಿಪರ ಸೇವಾ ಪ್ರಶಸ್ತಿ ಕುರಿತು ಸಂತಸ ವ್ಯಕ್ತಪಡಿಸಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯುವ ಉದ್ಯಮಿ ವೈಶಾಕ್ ರವರನ್ನು ಸಂಸ್ಥೆಗೆ ನೂತನ ಸದಸ್ಯರಾಗಿ ಸೇರ್ಪಡಿಸಲಾಯಿತು. ವೇದಿಕೆಯಲ್ಲಿ ಹಿರಿಯ ಸದಸ್ಯ ಡಾ| ಎಸ್.ಆರ್. ನಾಯಕ್ ಹಾಗೂ ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕ ರೊ| ಸುಮಿತ್ ರಾವ್, ಮಾಜಿ ಅಧ್ಯಕ್ಷ ಬಸವಕುಮಾರ್ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಗಣೇಶ್ ವಂದಿಸಿದರು.

Comments are closed.