ಬೆಂಗಳೂರು: ಈ ಬಾರಿ ಪಿಯು ಫಲಿತಾಂಶ ಪ್ರಕಟವಾಗಿದ್ದು, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಂದೂ ಪಿಯು ಕಾಲೇಜಿನ, ಬಾಳೆಹಣ್ಣು ವ್ಯಾಪಾರಿ ಪುತ್ರಿ ಕಲಾ ವಿಭಾಗದ ವಿದ್ಯಾರ್ಥಿ ಅನಿತಾ ಬಸಪ್ಪ 600ಕ್ಕೆ 585 ಅಂಕಗಳನ್ನು ಪಡೆದು ಟಾಪರ್ ಆಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ವಿಜಯಪುರದ ದರ್ಬಾರ್ ಕಾಲೇಜಿನ ವಿದ್ಯಾರ್ಥಿನಿ ಸಹನಾ ಕುಲಕರ್ಣಿ (594 ಅಂಕಗಳು ) ಟಾಪರ್.
ವಿಜ್ಞಾನ ವಿಭಾಗದಲ್ಲಿ ಬಸವೇಶ್ವರನಗರದ ಸರ್ದಾರ್ ವಲ್ಲಭಬಾಯ್ ಪಟೇಲ್ ಕಾಲೇಜಿನ ರಕ್ಷಿತಾ (596 ಅಂಕಗಳು) ಪ್ರಥಮ ಸ್ಥಾನ ಪಡೆದಿದ್ದಾರೆ.
ಕಳೆದ ಬಾರಿ ಶೇ93.9ರಷ್ಟು ಫಲಿತಾಂಶ ಪಡೆದಿದ್ದ ದಕ್ಷಿಣ ಕನ್ನಡ ಈ ಬಾರಿ ಶೇ.9048ಕ್ಕೆ ಇಳಿದಿದ್ದರೂ ಪ್ರಥಮ ಸ್ಥಾನ ಉಳಿಸಿಕೊಂಡಿದೆ. ಉಡುಪಿ ಎರಡನೇ ಸ್ಥಾನ ಉಳಿಸಿಕೊಂಡಿದೆ. ನಾಲ್ಕನೇ ಸ್ಥಾನದಲ್ಲಿದ್ದ ಕೊಡಗು ಮೂರನೇ ಸ್ಥಾನಕ್ಕೆ ಏರಿದ್ದರೆ, ಮೂರನೇ ಸ್ಥಾನದಲ್ಲಿದ್ದ ಉತ್ತರ ಕನ್ನಡ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಕ್ರಮವಾಗಿ 7, 8ನೇ ಸ್ಥಾನದಿಂದ 5 ಹಾಗೂ 6ನೇ ಸ್ಥಾನಕ್ಕೆ ಏರಿವೆ. ಕಳೆದ ಬಾರಿ 12ನೇ ಸ್ಥಾನದಲ್ಲಿದ್ದ ಬೆಂಗಳೂರು ಗ್ರಾಮಾಂತರ ಈ ಬಾರಿ 9ನೇ ಸ್ಥಾನಕ್ಕೆ ಏರಿದೆ.
ವಿಜ್ಞಾನ ವಿಭಾಗದಲ್ಲಿ ಉಡುಪಿ ಕಾರ್ಕಳದ ಜ್ಞಾನಸುಧಾ ಕಾಲೇಜಿನಿ ವಿದ್ಯಾರ್ಥಿನಿ ನೇಹಾ ಪಿ ಶೆಟ್ಟಿ ದ್ವಿತೀಯ ಶ್ರೇಯಾಂಕ ಪಡೆದಿದ್ದು, 600 ಅಂಕಕ್ಕೆ 592 ಅಂಕ ಪಡೆದಿದ್ದಾರೆ.
ಟಾಪ್ 10 ಜಿಲ್ಲೆಗಳು:
ದಕ್ಷಣಿ ಕನ್ನಡ (ಶೇ.90.48),ಉಡುಪಿ (ಶೇ.90.35), ಕೊಡಗು (ಶೇ.79.35), ಉತ್ತರ ಕನ್ನಡ (ಶೇ.76.44), ಬೆಂಗಳೂರು ದಕ್ಷಿಣ (70.88), ಬೆಂಗಳೂರು ಉತ್ತರ(70.83), ಶಿವಮೊಗ್ಗ (ಶೇ.69.28), ಚಿಕ್ಕಮಗಳೂರು (ಶೇ.67.34), ಬೆಂಗಳೂರು ಗ್ರಾಮಾಂತರ(ಶೇ.63.38), ಬಾಗಲಕೋಟೆ (ಶೇ.65.91)
ಗೊಂದಲದ ನಡುವೆ ಪರೀಕ್ಷೆ:
ಈ ಬಾರಿ ಎರಡು ಬಾರಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಮೂರನೇ ಬಾರಿಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಈ ನಡುವೆ, ಗಣಿತ ಪ್ರಶ್ನೆಪತ್ರಿಕೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೇಳಿದ್ದರಿಂದ 21 ಕೃಪಾಂಕ ನೀಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಕೃಪಾಂಕ ನೀಡುವ ಕುರಿತು ಸರಕಾರ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಆದರೆ ಅನಧಿಕೃತವಾಗಿ ಕೃಪಾಂಕ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಖಾಸಗಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿದ ಫಲಿತಾಂಶ ಗೊಂದಲಕ್ಕೀಡಾದ ಹಿನ್ನೆಲೆಯಲ್ಲಿ ಈ ಬಾರಿ, ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾತ್ರ ಫಲಿತಾಂಶ ಪ್ರಕಟಿಸಲಾಗುತ್ತಿದೆ.
ಇಲಾಖೆ ವೆಬ್‌ಸೈಟ್‌ನಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಮತ್ತು ಮರು ದಿನ ಬೆಳಗ್ಗೆ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ವೆಬ್‌ಸೈಟ್ ವಿಳಾಸ: www.karresults.nic.in, www.puckar.nic.in
Comments are closed.