ಕರಾವಳಿ

ಈ ಬಾರಿ ಮೂರು ವಿಭಾಗದಲ್ಲೂ ಬಾಲಕಿಯರೇ ಪ್ರಥಮ !

Pinterest LinkedIn Tumblr

puc

          ಅನಿತಾ ಬಸಪ್ಪ                                ಸಹನಾ ಕುಲಕರ್ಣಿ                              ರಕ್ಷಿತಾ ತಮನ್

ಬೆಂಗಳೂರು: ದ್ವಿತೀಯ ಪಿಯಸಿ ಫಲಿತಾಂಶ ಪ್ರಕಟಗೊಂಡಿದ್ದು ಈ ಬಾರಿ ಮೂರು ವಿಭಾದಲ್ಲಿ ಬಾಲಕಿಯರೇ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿ, ವಿಜ್ಞಾನ ವಿಭಾಗದಲ್ಲಿ ಬೆಂಗಳೂರು, ವಾಣಿಜ್ಯ ವಿಭಾಗದಲ್ಲಿ ವಿಜಯಪುರ, ಬೆಂಗಳೂರಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಬಳ್ಳಾರಿಯ ಕೊಟ್ಟೂರಿನ ಹಿಂದೂ ಪಿಯು ಕಾಲೇಜಿನ ವಿದ್ಯಾರ್ಥಿನಿ ಅನಿತಾ ಬಸಪ್ಪ ಕಲಾ ವಿಭಾಗದಲ್ಲಿ 600ಕ್ಕೆ 585 ಅಂಕಗಳನ್ನು ಪಡೆದಿದ್ದಾರೆ. ಇವರು ಬಸಪ್ಪ ಮತ್ತು ಕೆಂಚಮ್ಮ ದಂಪತಿಯ ಪುತ್ರಿ.

ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಸರ್ದಾರ್ ಪಟೇಲ್ ಪಿಯು ಕಾಲೇಜಿನ ರಕ್ಷಿತಾ ತಮನ್ 596 ಅಂಕಗಳಿಸಿದ್ದಾರೆ. ಇವರು ತಮನ್ ಜೆಪಿ ಮತ್ತು ಪಂಕಜಾ ದಂಪತಿಯ ಪುತ್ರಿ.

ವಾಣಿಜ್ಯ ವಿಭಾಗ
ವಿಜಯಪುರದ ದರ್ಬಾರ್ ಪಿಯು ಕಾಲೇಜಿನ ಸಹನಾ ಕುಲಕರ್ಣಿ 594 ಅಂಕಗಳಿಸಿದ್ದು, ಇವರು ಗುರುರಾಜ್ ಸುರೇಖಾ ದಂಪತಿಯ ಪುತ್ರಿ.

ಬೆಂಗಳೂರಿನ ಎಂಇಎಸ್‍ಪಿಯು ಕಾಲೇಜಿನ ಛಾಯಶ್ರೀ 594 ಅಂಗಳಿಸಿದ್ದು, ಇವರು ವೇಣುಗೋಪಾಲ್, ಯಶೋಧಾ ದಂಪತಿಯ ಪುತ್ರಿ

ಬೆಂಗಳೂರು ವಿವಿಪುರಂ ಎಸ್‍ಬಿ ಮಹಾವೀರ್ ಜೈನ್ ಪಿಯು ಕಾಲೇಜಿನ ದೀಕ್ಷಾ ನಾಯಕ್ 594 ಅಂಕಗಳಿಸಿದ್ದು, ಪುಂಡಲಿಕ್ ನಾಯಕ್ ಮತ್ತು ಗೀತಾ ನಾಯಕ್ ದಂಪತಿಯ ಪುತ್ರಿ.

Comments are closed.