ಕರಾವಳಿ

ನೆಹರೂ ಮೈದಾನದಲ್ಲಿ ನೆಹರೂ ಕಂಚಿನ ಪ್ರತಿಮೆ ಸ್ಥಾಪನೆ : ರೈ ಹಾಗೂ ವಿಪಕ್ಷ ನಾಯಕಿ ನಡುವೆ ಮಾತಿನ ಚಕಮಕಿ

Pinterest LinkedIn Tumblr

ನೆಹರೂ ಮೈದಾನದಲ್ಲಿ ನೆಹರೂ ಕಂಚಿನ ಪ್ರತಿಮೆ ಸ್ಥಾಪನೆ : ಕಾಂಗ್ರೆಸ್ / ಒಂದೇ ಸ್ಥಳದ ಸುತ್ತಮುತ್ತ ಮೂರು ಪ್ರತಿಮೆಯ ಅಗತ್ಯವಿದೆಯಾ : ಬಿಜೆಪಿ

Rai_neharu_Prathime_1

ಮಂಗಳೂರು: ನೆಹರೂ ಮೈದಾನದಲ್ಲಿ ನೆಹರೂ ಕಂಚಿನ ಪ್ರತಿಮೆ ಸ್ಥಾಪಿಸುವ ಬಗ್ಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನೆಹರೂ ಆವರ 7.5 ಆಡಿ ಎತ್ತರದ ಕಂಚಿನ ಪ್ರತಿಮೆಯ ದರಸೂಚಿ ಹಂತಗಳು ನಡೆಯುತ್ತಿದ್ದು ಇದು ಅಂತಿಮಗೊಂಡು ಸ್ಥಾಪನೆಕಾರ್ಯ ನಡೆಯಲಿದೆ ಎಂದರು.

ನೆಹರೂ ಪ್ರತಿಮೆ ನಿರ್ಮಾಣದ ಕುರಿತು ಸಭೆ ಅರಂಭವಾಗುತ್ತಿದ್ದಂತೆ ಮಾತನಾಡಿದ ಮನಪಾ ವಿಪಕ್ಷ ನಾಯಕಿ ರೂಪಾ. ಡಿ.ಬಂಗೇರ, ಮಾಜಿ ಪ್ರದಾನಿ ನೆಹರೂ ಅವರ ಬಗ್ಗೆ ಅಪಾರ ಗೌರವ ನಮಗಿದೆ. ಆದರೆ ಪುರಭವನದ ಮುಂಭಾಗ ಹಾಗೂ ಕಾರ್ಫೊರೇಶನ್ ಬ್ಯಾಂಕ್ ಮುಂಭಾಗ ನೆಹರೂ ಪ್ರತಿಮೆ ಇರುವಾಗ ಮತ್ತೆ ನೆಹರೂ ಮೈದಾನದಲ್ಲಿ ರಚಿಸುವ ಅಗತ್ಯ ಏನು? 50ಮೀಟರ್ ಒಳಗೆಯೇ ಇನ್ನೋಂದು ನೆಹರೂ ಪ್ರತಿಮೇ ಅಗತ್ಯವಿಲ್ಲ ಇದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿ ಸಭಾತ್ಯಾಗ ಮಾಡಲು ಮುಂದಾದರು.

Rai_neharu_Prathime_2

ಸಚಿವ ರಮಾನಾಥ ರೈ ಮಾತನಾಡಿ, ನೆಹರೂ ಮೈದಾನದಲ್ಲಿ ನೆಹರೂ ಪ್ರತಿಮೆ ಮಾಡುವುದರಲ್ಲಿ ತಪ್ಪೆನು ? ಮಾಜಿ ಪ್ರಧಾನಿಯ ಬಗ್ಗೆ ಈ ರೀತಿ ಮಾತನಾಡುವುದೇ ಅಗೌರವ. ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋದವರ ಬಗ್ಗೆಯೇ ಹೀಗೆ ಮಾತನಾಡುವುದೇ? ಇದೂ ಒಂದು ಅಸಹಿಷ್ಣುತೆ. ಯಾವುದೇ ಕಾರಣಕ್ಕೂ ನೆಹರೂ ಪ್ರತಿಮೆ ನಿರ್ಮಾಣ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದಾಗ ಸಚಿವರು ಹಾಗೂ ವಿಪಕ್ಷ ನಾಯಕಿ ನಡುವೆ ಮಾತಿನ ಚಕಮಕಿ ನಡೆಯಿತು.

ಮ.ನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಮಾತನಾಡಿ, ಪಾಲಿಕೆ ಸಭೆಯಲ್ಲಿ ಬಿಜೆಪಿಯವರು ಇದನ್ನು ವಿರೋಧಿಸಲಿಲ್ಲ, ಇಲ್ಲಿ ಮಾತ್ರ ಇವರು ವಿರೋಧಿಸುತ್ತಿದ್ದಾರೆ ಎಂದರು.ವಿವಾದದ ಬಗ್ಗೆ ಸಚಿವರಿಂದ ಸಮರ್ಪಕ ಉತ್ತರ ದೊರಕದ ಹಿನ್ನೆಲೆಯಲ್ಲಿ ರೂಪಾ ಡಿ.ಬಂಗೇರ ಹಾಗೂ ಉಪಮೇಯರ್ ಸುಮಿತ್ರಾ ಕರಿಯ ಅವರು ಸಭಾತ್ಯಾಗ ಮಾಡಿದರು.

Comments are closed.