ಕರಾವಳಿ

ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ ಯುವಕ ಪೋಕ್ಸೋ ಕಾಯ್ದೆಯಡಿ ಬಂಧನ

Pinterest LinkedIn Tumblr

puttur_focsko_act

ವಿಟ್ಲ, ಮೇ.30: ವಿಟ್ಲ ಮುಡ್ನೂರು ಗ್ರಾಮದ ಅಪ್ರಾಪ್ತ ಬಾಲಕಿಗೆ ಯುವಕನೊಬ್ಬ ದೂರವಾಣಿ ಮೂಲಕ ಕರೆ ಮಾಡಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಲ್ಲದೆ  ಆಕೆಗೆ ಜೀವ ಬೆದರಿಕೆ ಹಾಕಿದ್ದರಿಂದ ಬೆದರಿದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ವಶಕ್ಕೆ ಪಡೆದುಕೊಂದಿದ್ದಾರೆ.

ಯುವಕನನ್ನು ಕೊಳ್ನಾಡು ಗ್ರಾಮದ ಕರೈ ನಿವಾಸಿ ಸಂಶುದ್ದೀನ್(25) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ವಿಟ್ಲದ ಜ್ಯುವೆಲ್ಲರಿಯೊಂದರಲ್ಲಿ ಕಳೆದ ಮೂರು ತಿಂಗಳುಗಳಿಂದ ಕೆಲಸ ಮಾಡುತ್ತಿರುವ ವಿಟ್ಲಮುಡ್ನೂರು ಗ್ರಾಮದ 16 ವರ್ಷದ ಬಾಲಕಿಯ ಮನೆಯ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡಿದ್ದ ಆರೋಪಿ ಸಂಶುದ್ದೀನ್ ಆಗಾಗ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದ ಎನ್ನಲಾಗಿದೆ.

ಮೇ.26ರಂದು ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆಗೆ ಕರೆ ಮಾಡಿ ‘ನನ್ನ ರೂಮಿಗೆ ಬಾ ಇಲ್ಲವಾದರೆ ನಾನು ನಿನ್ನ ಮನೆಗೆ ಬರುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಸಂಶುದ್ದೀನ್ ಬೆದರಿಕೆ ಹಾಕಿದ್ದರಿಂದ ಗಾಬರಿಗೊಳಗಾದ ಬಾಲಕಿ ಮನೆಯಲ್ಲಿ ವಿಷವನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಆಕೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸಂಶುದ್ದೀನ್ ಮೇಲೆ ಈ ಹಿಂದೆಯೂ ಸ್ಥಳೀಯವಾಗಿ ಇಂಥ ಆರೋಪ ಕೇಳಿ ಬಂದಿತ್ತೆನ್ನಲಾಗಿದೆ.

Comments are closed.