ಕರಾವಳಿ

ಮಂಗಳೂರು : ನೂತನ ಐಜಿಪಿ ಜೆ. ಅರುಣ್ ಚಕ್ರವರ್ತಿ ಅಧಿಕಾರ ಸ್ವೀಕಾರ

Pinterest LinkedIn Tumblr

 

IGP_Arun_Chakrvarty_1

ಮಂಗಳೂರು, ಮೇ 30: ಪಶ್ಚಿಮ ವಲಯದ ನೂತನ ಐಜಿಪಿಯಾಗಿ ಜೆ. ಅರುಣ್ ಚಕ್ರವರ್ತಿ ಅವರು ಸೋಮವಾರ ಮಂಗಳೂರಿನ ತಮ್ಮ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಮೂಲತಹ ಚಿಕ್ಕಮಂಗಳೂರಿನವರಾದ ಚಕ್ರವರ್ತಿಯವರು 1990ರಲ್ಲಿ ಕಂದಾಯ (ಕಸ್ಟಮ್ಸ್) ಇಲಾಖೆಯ ಇನ್‌ಸ್ಪೆಕ್ಟರ್ ಆಗಿ ನಿಯುಕ್ತಿಗೊಂಡರು. 1995ರಲ್ಲಿ ಐಪಿಎಸ್‌ಗೆ ಅಯ್ಕೆಯಾದ ಇವರು, ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಎ‌ಎಸ್ಪಿಯಾಗಿ, ಹಾಗೂ ಬಳಿಕ ರಾಯಚೂರು ಮತ್ತು ಚಿತ್ರದುರ್ಗಗಳಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ವಿಶ್ವಸಂಸ್ಥೆಯ ಸಂಸ್ಥೆ ಪೂರ್ವ ಯುರೋಪ್ ನಲ್ಲಿ ಅಯೋಜಿಸಿದ್ದ ಶಾಂತಿಪಾಲನಾ ಪಡೆಯಲ್ಲಿ ತರಭೇತಿ ಪಡೆದಿದ್ದಾರೆ. ಅನಂತರ ಮತ್ತೆ ಶಿವಮೊಗ್ಗ ಜಿಲ್ಲೆ ಹಾಗೂ ವಿಜಾಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅರುಣ್ ಚಕ್ರವರ್ತಿಯವರು ಅದೇ ಜಿಲ್ಲೆಯಲ್ಲಿ ಡೆಪ್ಯುಟಿ ಐಜಿಪಿಯಾಗಿ ಬಡ್ತಿ ಪಡೆದರು.

IGP_Arun_Chakrvarty_2 IGP_Arun_Chakrvarty_3 IGP_Arun_Chakrvarty_4 IGP_Arun_Chakrvarty_5

ಬಳಿಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಬೆಂಗಳೂರು ಇದರ ನಿರ್ದೇಶಕರಾಗಿ, ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ಡಿಐಜಿಯಾಗಿ ಕಾರ್ಯನಿರ್ವಹಿಸಿದರು.ಬಳಿಕ ಐಜಿಪಿಯಾಗಿ ಬಡ್ತಿ ಪಡೆದ ಅರುಣ್ ಚಕ್ರವರ್ತಿಯವರು ಕರ್ನಾಟಕ ಲೋಕಾಯುಕ್ತ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಪ್ರಧಾನ (ಹೆಡ್ ಕ್ವಾರ್ಟರ್ಸ್) ಕಚೇರಿ, ಬೆಂಗಳೂರು ಹಾಗೂ ಸೆಂಟ್ರಲ್ ಬೆಂಗಳೂರು ಮುಂತಾದ ಕಡೆ ಐಜಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು 1996-97ರ ಅವಧಿಯಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರೆಬೆಷನರ್ ಆಗಿ ಸೇವೆ ಸಲ್ಲಿಸಿದ ಅನುಭವವಿದೆ, ಹಾಗಾಗಿ ಉಡುಪಿ ಮತ್ತು ದ.ಕ. ಜಿಲ್ಲೆಯ ಬಗ್ಗೆ ಹೆಚ್ಚಿನ ಪರಿಚಯವಿದೆ. .ಇಲ್ಲಿ ಸಾಕಷ್ಟು ಸವಾಲುಗಳಿವೆ ಅದನ್ನು ಸಮರ್ಥವಾಗಿ ಎದುರಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿ ತಿಳಿಸಿದರು.

ಮಂಗಳೂರು ನಗರ ಪೊಲೀಸ್ ಅಯುಕ್ತರಾದ ಎಸ್.ಚಂದ್ರಶೇಖರ್ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Comments are closed.